ಬೆಂಗಳೂರು: ಕಳೆದ ಭಾನುವಾರ ರೈಲ್ವೇ ಹಳಿ ಪಕ್ಕದ ಪೊದೆಯಲ್ಲಿ 2.5 ಮಿಲಿಯನ್ ಡಾಲರ್ ಚಿಂದಿ ಆಯ್ತಿದ್ದವನಿಗೆ ಸಿಕ್ಕಿದ್ದು, ಇದೀಗ ಡಾಲರ್ ಬಾಕ್ಸ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಚಿಂದಿ ಆಯ್ತಿದ್ದವನಿಗೆ ರೈಲ್ವೇ ಹಳಿ ಪಕ್ಕದ ಪೊದೆಯಲ್ಲಿ 2.5 ಮಿಲಿಯನ್ ಯುಎಸ್ ಡಾಲರ್ ಸಿಕ್ಕಿತ್ತು ಬಳಿಕ ಆತ ಈ ವಿಚಾರವನ್ನು ತನ್ನ ಮಾಲೀಕನಿಗೆ ತಿಳಿಸಿದ್ದನು. ಮತ್ತೋರ್ವ ವ್ಯಕ್ತಿ ಕೂಡ ಇದನ್ನು ಕಂಡು ಕಮಿಷನರ್ಗೆ ಮಾಹಿತಿ ಹಂಚಿಕೊಂಡಿದ್ದನು. ಕೂಡಲೇ ಪೊದೆಯಲ್ಲಿ ಸಿಕ್ಕ ಹಣದ ಬಗ್ಗೆ ಹೆಬ್ಬಾಳ ಠಾಣೆಗೆ ಮಾಹಿತಿ ರವಾನಿಸಲಾಗಿದೆ.
ಇನ್ನು ವಶಕ್ಕೆ ಪಡೆದ ಡಾಲರ್ಸ್ ಜೊತೆ ವಿಶ್ವ ಸಂಸ್ಥೆಯ ಲೆಟರ್ ಹೆಡ್ನಲ್ಲಿರೋ ಪತ್ರವೊಂದು ಸಿಕ್ಕಿದ್ದು, ಅಮೆರಿಕದಿಂದ ಅಭಿವೃದ್ಧಿಗಾಗಿ ಕಳುಹಿಸಲಾದ ಹಣ ಇದು ಎಂದು ಹೇಳಲಾಗುತ್ತಿದೆ. ಮಾತ್ರವಲ್ಲದೆ, ಸಿಕ್ಕ ಪತ್ರದಲ್ಲಿ ಮಿಲಿಯನ್ಸ್ ಆಫ್ ಡಾಲರ್ಸ್ ಬಗ್ಗೆ ಗೌಪ್ಯತೆ ಕಾಪಾಡಿ ಎಂದು ಉಲ್ಲೇಖಿಸಲಾಗಿದೆ.
ಈ ವಿಚಾರಣೆಗೆ ಸಂಬಂಧಿಸಿದಂತೆ ಸತ್ಯ ಹುಡುಕಲು ಹೆಬ್ಬಾಳ ಪೊಲೀಸರು ಆರ್ ಬಿ ಐ ಗೆ ಪತ್ರ ಬರೆದಿರುವುದಾಗಿ ತಿಳಿದು ಬಂದಿದೆ.