Bengaluru 22°C
Ad

ರೋಹಿಣಿ ಸಿಂಧೂರಿ, ಪತಿ ವಿರುದ್ಧ ಖ್ಯಾತ ಗಾಯಕ ಲಕ್ಕಿ ಆಲಿ ಲೋಕಾಯುಕ್ತಕ್ಕೆ ದೂರು

Case

ಬೆಂಗಳೂರು: ಖ್ಯಾತ ಗಾಯಕ ಲಕ್ಕಿ ಆಲಿ ಅವರು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ, ಅವರ ಪತಿ ಹಾಗೂ ಬಾಮೈದನ ವಿರುದ್ಧ ಕರ್ನಾಟಕ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ. ಹೀಗಾಗಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಮತ್ತೊಂದು ಸಂಕಷ್ಟ ಎದುರಾದಂತೆ ಆಗಿದೆ.

Ad
300x250 2

ಈ ಕುರಿತಂತೆ ಕರ್ನಾಟಕ ಲೋಕಾಯುಕ್ತ ಪೊಲೀಸರಿಗೆ ಸಲ್ಲಿಸಿರುವ ದೂರಿನ ಪ್ರತಿಯನ್ನು ಎಕ್ಸ್ ನಲ್ಲಿ ಖ್ಯಾತ ಗಾಯಕ ಲಕ್ಕಿ ಆಲಿ ಅವರು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ, ಅವರ ಪತಿ ಸುಧೀರ್ ರೆಡ್ಡಿ ಹಾಗೂ ಬಾಮೈದ ಮಧುಸೂಧನ ರೆಡ್ಡಿ ವಿರುದ್ಧ ದೂರು ನೀಡಿದ್ದಾರೆ.

ಅವರು ನೀಡಿರುವ ದೂರಿನಲ್ಲಿ ಯಲಹಂಕ ನ್ಯೂ ಟೌನ್ ವ್ಯಾಪ್ತಿಯಲ್ಲಿರುವ ತಮ್ಮ ಟ್ರಸ್ಟ್ ಗೆ ಸಂಬಂಧಿಸಿದ ಭೂಮಿಯನ್ನು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ, ಅವರ ಭಾಮೈದ ಮಧುಸೂಧನ ಅವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬುದಾಗಿ ಆರೋಪಿಸಿದ್ದಾರೆ.

https://x.com/luckyali/status/1803762086457053653

 

 

Ad
Ad
Nk Channel Final 21 09 2023
Ad