ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಮಾಳವಿಕಾ ನಾಯರ್ ನಟಿಸಿರುವ ಕೃಷ್ಣಂ ಪ್ರಣಯ ಸಖಿ ಸಿನಿಮಾದ ದ್ವಾಪರ ದಾಟುತ ಸೇರಿ ಮೂರು ಹಾಡುಗಳು ಹಿಟ್ ಆಗಿವೆ. ಇದರ ಬೆನ್ನಲ್ಲೇ, ಚಿತ್ರತಂಡವು ನಾಲ್ಕನೇ ಹಾಡನ್ನು ಕೂಡ ಬಿಡುಗಡೆ ಮಾಡಿದೆ. ಸೋನು ನಿಗಮ್ ಹಾಡಿರುವ ಹೇ ಗಗನ ಎಂಬ ರೊಮ್ಯಾಂಟಿಕ್ ಹಾಡನ್ನು ಭಾನುವಾರ (ಆಗಸ್ಟ್ 4) ಬಿಡುಗಡೆ ಮಾಡಲಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಸೇರಿ ಹಲವು ಗಣ್ಯರ ಸಮ್ಮುಖದಲ್ಲಿ ಹಾಡನ್ನು ಬಿಡುಗಡೆ ಮಾಡಲಾಗಿದೆ.
“ಮೈ ಮ್ಯಾರೇಜ್ ಈಸ್ ಫಿಕ್ಸ್ಡ್” ಹಾಗೂ “ಚಿನ್ನಮ್ಮ” ಹಾಡುಗಳು ಹಿಟ್ ಆದ ಬಳಿಕ ಬಿಡುಗಡೆಯಾದ, ಪಂಜಾಬಿ ಗಾಯಕ ಜಸ್‌ಕರಣ್ ಸಿಂಗ್ ಹಾಡಿರುವ ದ್ವಾಪರ ದಾಟುತ ಹಾಡಂತೂ ಯುಟ್ಯೂಬ್ ಸೇರಿ ಎಲ್ಲ ಜಾಲತಾಣಗಳಲ್ಲಿ ದಾಖಲೆ ಬರೆದಿದೆ. ಇದರ ಬೆನ್ನಲ್ಲೇ ಸಿನಿಮಾ ತಂಡವು ನಾಲ್ಕನೇ ಹಾಡನ್ನು ಕೂಡ ಬಿಡುಗಡೆ ಮಾಡಿದೆ. ಆಗಸ್ಟ್ 15ರಂದು ಸಿನಿಮಾ ಬಿಡುಗಡೆಯಾಗಲಿದೆ.
Ad