ಬೆಂಗಳೂರು: ಶ್ರೀನಗರಕ್ಕೆ ಸಂಚರಿಸುವ ರಾಜ್ಯ ರಸ್ತೆ ಸಾರಿಗೆ ಬಸ್ಸು. ಸಾರ್ವಜನಿಕರು ಹಾಗೂ ಕನ್ನಡ ಪ್ರೇಮಿಗಳು ಅಪಾರವಾದ ಸಂತೋಷ ವ್ಯಕ್ತಪಡಿಸಿದ್ದಾರೆ.
Ad
ಬೆಂಗಳೂರು ಮಹಾನಗರದ ಶ್ರೀನಗರದಿಂದ ನಾಗಮಂಗಲ ಮಾರ್ಗವಾಗಿ ಕೆ.ಆರ್.ಪೇಟೆಗೆ ಸಂಚರಿಸುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನ ಚಾಲಕ ವೀರೇಶ್ ಹಾಗೂ ನಿರ್ವಾಹಕರಾದ ಸಿದ್ದರಾಜು ಅವರ ಕನ್ನಡ ಪ್ರೇಮಕ್ಕೆ ನಾಡಿನ ಜನತೆ ಫಿಧಾ ಆಗಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Ad
ವಿಶೇಷವಾಗಿ ಕನ್ನಡ ಧ್ವಜಗಳು, ಕನ್ನಡದ ಕವಿಗಳು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಭಾವ ಚಿತ್ರಗಳನ್ನು ಬಸ್ಸಿಗೆ ಅಲಂಕರಿಸಿ, ಕನ್ನಡ ಗೀತೆಗಳನ್ನು ಬಸ್ಸಿನ ಪ್ರಯಾಣಿಕರಿಗೆ ಧ್ವನಿವರ್ಧಕದ ಮೂಲಕ ಕೇಳಿಸಿ ವಿಶೇಷವಾಗಿ ಕನ್ನಡ ರಾಜ್ಯೋತ್ಸವ ಆಚರಿಸಿ ತಮ್ಮ ಕನ್ನಡಾಭಿಮಾನವನ್ನು ಪ್ರದರ್ಶನ ಮಾಡಿದ್ದಾರೆ.
Ad
Ad