Categories: ಕೋಲಾರ

ಕೋಲಾರದಿಂದ ನಾಪತ್ತೆಯಾಗಿದ್ದ ಟೊಮೆಟೊ ಲಾರಿ ಗುಜರಾತ್ ನಲ್ಲಿ ಪತ್ತೆ

ಕೋಲಾರ: ಕೋಲಾರದ ಎಪಿಎಂಸಿಯಿಂದ ಸುಮಾರು 21 ಲಕ್ಷ ರೂ. ಮೌಲ್ಯದ ಟೊಮೆಟೊ ಹೊತ್ತು ನಾಪತ್ತೆಯಾಗಿದ್ದ ಲಾರಿ ಕೊನೆಗೂ ಗುಜರಾತಿನಲ್ಲಿ ಪತ್ತೆಯಾಗಿದೆ. ಕೋಲಾರದಿಂದ ರಾಜಸ್ಥಾನದ ಜೈಪುರಕ್ಕೆ ಹೋಗಿ ಬೇಕಿದ್ದ ಲಾರಿ ಗುಜರಾತ್​ನ ಅಹಮದಾಬಾದ್​ನಲ್ಲಿ ಸಿಕ್ಕಿದ್ದು, ಲಾರಿ ಚಾಲಕ ಟೊಮೆಟೊವನ್ನು ಅರ್ಧ ಬೆಲೆಗೆ ಮಾರಾಟ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಚಾಲಕ ಅನ್ವರ್​ ಲಾರಿಯಲ್ಲಿ ಅಳವಡಿಸಿದ್ದ ಜಿಪಿಎಸ್ ಕಿತ್ತೆಸೆದು ಅಹಮದಾಬಾದ್​ಗೆ ಚಲಾಯಿಸಿಕೊಂಡು ಹೋಗಿದ್ದಾನೆ. ಬಳಿಕ ಅಲ್ಲಿ ಟೊಮೆಟೊವನ್ನು ಅರ್ಧ ದರಕ್ಕೆ ಮಾರಾಟ ಮಾಡಿ ಇದೀಗ ತಲೆಮರಿಸಿಕೊಂಡಿದ್ದಾನೆ.

ಇನ್ನು ಟೊಮೆಟೊ ಮಾರಾಟದಿಂದ ಬಂದ ಹಣದೊಂದಿಗೆ ನಾಪತ್ತೆಯಾಗಿರುವ ಚಾಲಕ ಅನ್ವರ್ ವಿರುದ್ದ ಮೆಹತ್ ಟ್ರಾನ್ಸ್ ಪೋರ್ಟ್ ಗೆ ಸೇರಿದ ಮುನಿರೆಡ್ಡಿ  ಅಹಮದಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  ಲಾರಿ ಚಾಲಕನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

 

Ashitha S

Recent Posts

ಶವರ್ಮಾ ತಿಂದು ಪ್ರಾಣಬಿಟ್ಟ 19 ವರ್ಷದ ಯುವಕ

ಚಿಕನ್​​ ಶವರ್ಮಾ ತಿಂದು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂಥದ್ದೇ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, 19 ವರ್ಷದ ಯುವಕನೊಬ್ಬ ಚಿಕನ್ ಶವರ್ಮಾ…

1 min ago

ಮೇ 11ರಿಂದ 13ರವರೆಗೆ ವಾಮಂಜೂರಿನಲ್ಲಿ ಕೃಷಿ ಮೇಳ, ದಶಮ ಸಂಭ್ರಮ

ಇದೇ ಮೇ 11ರಿಂದ 13ರವರೆಗೆ ವಾಮಂಜೂರಿನ ಶ್ರೀ ಅಮೃತೇಶ್ವರ ದೇವಸ್ಥಾನದ ಮುಂಭಾಗ ಜರುಗಲಿದೆ ಎಂದು ಗುರುಪುರ ವ್ಯವಸಾಯ ಸೇವಾ ಸಹಕಾರಿ…

4 mins ago

ವಿದ್ಯುತ್ ಸಮಸ್ಯೆ ಪರಿಹರಿಸಲು ಬೆಸ್ಕಾಂನಿಂದ ವಾಟ್ಸಾಪ್ ನಂಬರ್ ಬಿಡುಗಡೆ

ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ಪರಿಹರಿಸಲು ಬೆಸ್ಕಾಂ ಎಂಟು ಜಿಲ್ಲೆಗಳಿಗೆ ವಾಟ್ಸಾಪ್ ನಂಬರ್ ಬಿಡುಗಡೆ ಮಾಡಿದ್ದು, ಬೆಸ್ಕಾಂ ವ್ಯಾಪ್ತಿಯ ಜಿಲ್ಲೆಯ ಜನರು…

17 mins ago

ಎಸ್‌ಎಸ್‌ಎಲ್‌ಸಿ 2,3ನೇ ಪರೀಕ್ಷೆ ಬರೆಯುವವರಿಗೆ ಸ್ಪೆಷಲ್‌ ಕ್ಲಾಸ್‌ ಯೋಜನೆ

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶವನ್ನು ಗುರುವಾರ (ಮೇ 9) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ…

21 mins ago

ಚುನಾವಣೆ ಮುಕ್ತಾಯದ ಬೆನ್ನಲ್ಲೇ ಆಕ್ಟಿವ್ ಆದ ಶಾಸಕ ಪ್ರಭು ಚವಾಣ್

ಲೋಕಸಭಾ ಚುನಾವಣೆ ಮುಕ್ತಾಯ ಬೆನ್ನಲ್ಲೇ ಬೀದರ್ ಜಿಲ್ಲೆ ಔರಾದ್ ಶಾಸಕ ಪ್ರಭು ಚವಾಣ್ ಕ್ಷೇತ್ರದಲ್ಲಿ ಆಕ್ಟಿವ್ ಆಗಿದ್ದಾರೆ. ಅನಾರೋಗ್ಯ ಕಾರಣ…

34 mins ago

ಶಾಸಕ ಇಕ್ಬಾಲ್‌ ಹುಸೇನ್‌ ವಿಡಿಯೋ ವೈರಲ್‌ ಕೇಸ್‌ : ಇಬ್ಬರ ಬಂಧನ

ಶಾಸಕ ಇಕ್ಬಾಲ್‌ ಹಸೇನ್‌ ಅವರು ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತೆ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದ ವಿಡಿಯೋ ವೈರಲ್‌ ಮಾಡಿದ್ದ ಆರೋಪದಡಿ…

36 mins ago