News Karnataka Kannada
Saturday, April 20 2024
Cricket
ಬೆಂಗಳೂರು

ಬಿಜೆಪಿ ವಿರೋಧಿ ನೀತಿಯ ವಿರುದ್ಧ ಕಿಮ್ಮನೆ ರತ್ನಾಕರ್ ಪ್ರತಿಭಟನೆ

Kimmane Ratnakar protests against anti-BJP policy
Photo Credit : News Kannada

ಬೆಂಗಳೂರು: ಕೇಂದ್ರದ ಬಿಜೆಪಿಯವರ ನಡುವಳಿಕೆಗೆ ಪ್ರತಿಕ್ರಿಯೆ ಅಗತ್ಯವಿದ್ದು ಅವರ ವಿರೋಧಿ ನೀತಿಯ ವಿರುದ್ಧ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಗ್ಯಾರೆಂಟಿಯ ವಿಳಂಬವನ್ನೇ ಬಳಸಿಕೊಂಡು ಬಿಜೆಪಿ ಉಪವಾಸ ಸತ್ಯಾಗ್ರಹಕ್ಕೆ ಇಳಿದಿದೆ. ರಾಜ್ಯದಲ್ಲಿ ನಾಯಕತ್ವ ವಹಿಸಿದವರು ಜವಬ್ದಾರಿ ಮೆರೆಯಬೇಕಿತ್ತು ಎಂದು ಬಿಎಸ್ ವೈ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 1 ಲಕ್ಷ ರೂ ಸಾಲ ಮನ್ನಾ ಮಾಡುವ ಭರವಸೆ ಸೇರಿ 605 ಚುನಾವಣೆ ಪ್ರನಾಳಿಕೆ ಬಗ್ಗೆ ಮಾತನಾಡಿದ್ದ ಬಿಜೆಪಿ ಇದುವರೆಗೂ 30 ಅಂಶವನ್ನೂ ಈಡೇರಿಸಲಿಲ್ಲ.

ಮೋದಿಯವರು ನೀವು ಅಧಿಕಾರಕೊಡಿ 90 ದಿನಗಳಲ್ಲಿ ಸ್ವಿಸ್ ಬ್ಯಾಂಕ್ ನಿಂದ ಹಣ ತಂದು ಪ್ರತಿಯೊಬ್ಬನಿಗೂ 15 ಲಕ್ಷ ಹಣ ಕೊಡುವುದಾಗಿ ಭರವಸೆ. ಉದ್ಯೋಗ ಖಾತರಿ ಬಗ್ಗೆ ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡುವುದಾಗಿ ಭವರಸೆ ಇತ್ತು. ಇದುವರೆಗೆ ಎಷ್ಟು ಜನರಿಗೆ ಉದ್ಯೋಗ ನೀಡಿದರು ಎಂದು ಶ್ವೇತ ಪತ್ರ ಹೊರಡಿಸಲಿ.

ಸ್ವಾಮಿನಾಥನ್ ವರದಿ ಜಾರಿಗೆ ಮಾಡುವುದಾಗಿ ಭರವಸೆ ಈಡೇರಲಿಲ್ಲ. ಡಾಲರ್ ಮತ್ತು ರೂಪಾಯಿನ್ನ ಸರಿದೂಗಿಸುವುದಾಗಿ ಭರವಸೆ ನೀಡಿದ್ದ ಬಿಜೆಪಿಯು ಈ ಬಗ್ಗೆ ಎಷ್ಟು ಈಡೇರಿಕೆ ಮಾಡಿದ್ದಾರೆ ಎಂದು ಮಾಜಿ ಸಿಎಂ‌ ಬಿಎಸ್ ವೈ ಮತ್ತು ಅಶೊಕ್ ಗೆ ಹೊಳೆಯಲ್ವಾ?

ಜನವರಿಯ ವರೆಗೆ ಬಿಜೆಪಿ ಕಾಂಗ್ರೆಸ್ ಗ್ಯಾರೆಂಟಿ ಬಗ್ಗೆ ಮಾತನಾಡಬಾರದು ಎಂದು ಕಿಮ್ಮನೆ ಟಾಂಗ್ ನೀಡಿದರು. ಶಕ್ತಿ ಯೋಜನೆಯಲ್ಲಿ ಮೂರು ದಿನದಲ್ಲಿ 3 ಕೋಟಿ ಮಹಿಳೆಯರು ಅನುಕೂಲ ಪಡೆದಿದ್ದಾರೆ. ಯಾವತ್ತೂ ಧರ್ಮಸ್ಥಳ ನೋಡದೆ ಇರುವವರು ಇವತ್ತು ಶಕ್ತಿಯೋಜನೆಯಿಂದ ಅನುಕೂಲ ಪಡೆದುಕೊಂಡಿದ್ದಾರೆ.

ಬಿಜೆಪಿ ಪೂರ್ವಜರು ಈಗಿನ ಬಿಜೆಪಿಯವರು ಬಡವರ ವಿರುದ್ಧವಾಗಿ ಹೋರಾಡಿದವರು. ಇದನ್ನ ವಿರೋಧಿಸಿ ಜು.3 ರಂದು ಶಿವಮೊಗ್ಗದ ಗಾಂಧಿ ಪಾರ್ಕ್ ನಲ್ಲಿ ಗಾಂಧಿ ಪ್ರತಿಮೆ ಎದುರು ಬೆಳಿಗ್ಗೆ 9-30ರಿಂದ 5-30 ರವರೆಗೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದರು.

ಆರ್ ಜಿ ಪಾಟೀಲ್ ದಿವ್ಯ ಹಾಗರಗಿ ಸ್ಯಾಂಟ್ರೋ ರವಿಯ ಹಣದಲ್ಲಿ ಸೋತಿರುವೆ ನಾನು ಆರಗನ ವಿರುದ್ಧ ಚುನಾವಣೆ ಸೋತಿಲ್ಲವೆಂದರು. ಕೇಂದ್ರ ಸರ್ಕಾರ ಅಕ್ಕಿಕೊಡಲ್ಲ ಎಂದಿದೆ. ನಾಳೆ ಬೇರೆ ಏನೂ ಕೊಡಲ್ಲ ಎನ್ನುತ್ತಾರೆ. ಇದು ದೇಶದ ಏಕತೆಗೆ ದಕ್ಕೆಯಾಗಲಿದೆ ಎಂದು ಗುಡುಗಿದರು.‌

ವಿಧಾನ ಪರಿಷತನ ಮಾಜಿ ಸದಸ್ಯ ಆರ್.ಪ್ರಸನ್ನ ಕುಮಾರ್, ಒಬಿಸಿ ಜಿಲ್ಲಾ ಅಧ್ಯಕ್ಷ‌ ಇಕ್ಕೇರಿ ರಮೇಶ್, ಎನ್ ರಮೇಶ್, ವಿಶ್ವನಾಥ್ ಕಾಶಿ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಂ ಪಾಷ ಚೇತನ್ ಗೌಡ, ಬಾಲಾಜಿ ಮೊದಲಾದವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು