Ad

ಮೇಘಸ್ಫೋಟ: ಕೇದಾರನಾಥನ ದರ್ಶನಕ್ಕೆ ತೆರಳಿದ್ದ ಕನ್ನಡಿಗರ ಪರದಾಟ!

ಮೇಘಸ್ಫೋಟದಿಂದ ಕೇದಾರ್‌ನಾಥದಲ್ಲಿ ಹಲವೆಡೆ ಗುಡ್ಡ ಕುಸಿತ ಉಂಟಾಗಿದ್ದು, ಬೆಂಗಳೂರಿನಿಂದ ಕೇದಾರನಾಥನ ದರ್ಶನಕ್ಕೆ ತೆರಳಿದ್ದ ಕನ್ನಡಿಗರು ಪರದಾಡುತ್ತಿದ್ದಾರೆ.

ಬೆಂಗಳೂರು: ಮೇಘಸ್ಫೋಟದಿಂದ ಕೇದಾರ್‌ನಾಥದಲ್ಲಿ ಹಲವೆಡೆ ಗುಡ್ಡ ಕುಸಿತ ಉಂಟಾಗಿದ್ದು, ಬೆಂಗಳೂರಿನಿಂದ ಕೇದಾರನಾಥನ ದರ್ಶನಕ್ಕೆ ತೆರಳಿದ್ದ ಕನ್ನಡಿಗರು ಪರದಾಡುತ್ತಿದ್ದಾರೆ.

ಬೆಂಗಳೂರಿನಿಂದ ಕೇದಾರನಾಥ್ ಗೆ ತೆರಳಿದ್ದ 15 ಜನ ಸ್ನೇಹಿತರ ತಂಡ ಕೇದಾರನಾಥ್ ನಲ್ಲಿ ದಿಕ್ಕು ತೋಚದೇ ಕಂಗಾಲಾಗಿದ್ದಾರೆ. ಬೆಂಗಳೂರಿನ ಬೇರೆ ಬೇರೆ ಏರಿಯಾಗಳಿಂದ ಹೊರಟಿದ್ದ 15 ಜನರ ಪೈಕಿ, 6 ಜನರು ಸಂಪರ್ಕಕ್ಕೆ ಸಿಗದೇ ಇರೋದು ಇತರರನ್ನು ಕಂಗಾಲಾಗಿಸಿದೆ.

ತಿನ್ನೋಕೆ ಊಟವು ಇಲ್ಲದೇ ಬಿಸ್ಕೆಟ್ ತಿಂದು ಎರಡ್ಮೂರು ದಿನ ಕಾಲ ನೂಕಿದ್ದ ಕನ್ನಡಿಗರ ಪೈಕಿ 5 ಜನರನ್ನ ರಕ್ಷಣಾತಂಡ ಸುರಕ್ಷಿತ ಸ್ಥಳಕ್ಕೆ ರವಾನಿಸಿದೆ. ಉಳಿದ ಕನ್ನಡಿಗರು ರೆಸ್ಕ್ಯೂ ಪಾಯಿಂಟ್ ನಲ್ಲಿ ರಕ್ಷಣೆಗೆ ಕಾದು ನಿಂತ ಜನರ ಗುಂಪಿನ ಜೊತೆ ಕಾದುಕುಳಿತಿದ್ದಾರೆ.

ಬೆಂಗಳೂರಿನಿಂದ ಕೇದಾರನಾಥ್ ಗೆ ಹೊರಟಿದ್ದ 20 ಸದಸ್ಯರಿದ್ದ ಮತ್ತೊಂದು ತಂಡ ರಕ್ಷಣಾ ಪಡೆಯ ನೆರವಿನಿಂದ ಸುರಕ್ಷಿತ ಸ್ಥಳಕ್ಕೆ ತಲುಪಿದ್ದು, 20ಜನರ ಪೈಕಿ ಓರ್ವ ವ್ಯಕ್ತಿ ಸಂಪರ್ಕಕ್ಕೆ ಸಿಗ್ತಿಲ್ಲ ಅಂತಾ ತಂಡದ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ಯಾಕೇಜ್ ಟೂರ್ ನಲ್ಲಿ ಯಾತ್ರೆಗೆ ಹೊರಟಿದ್ದ ಈ ತಂಡ ಸದ್ಯ ಸುರಕ್ಷಿತ ಸ್ಥಳ ತಲುಪಿದ್ದು, ಯಾತ್ರೆ ವೇಳೆ ಆದ ಅನುಭವವನ್ನು ಯಾತ್ರಾರ್ಥಿಗಳು ತಿಳಿಸಿದ್ದಾರೆ. ಕೇದಾರನಾಥ್ ನಲ್ಲಿ ಸಿಲುಕಿರುವ ಯಾತ್ರಾರ್ಥಿಗಳ ರಕ್ಷಣೆಗೆ ಸ್ಥಳೀಯ ಪೊಲೀಸರು, SDRF ತಂಡ ಕಾರ್ಯಾಚರಣೆ ಮುಂದುವರಿಸಿದೆ.

Ad
Ad
Nk Channel Final 21 09 2023