News Karnataka Kannada
Wednesday, April 17 2024
Cricket
ಬೆಂಗಳೂರು

ಸ್ಪೂರ್ತಿಯ ಸೆಲೆ ಕೆ.ಶಿವರಾಮ್; ಸಿನಿಮಾ ಆಗುವುದರಲ್ಲಿತ್ತು ಇವರ ಜೀವನಕಥೆ

ಕೆ. ಶಿವರಾಮ್ ನಡೆದುಬಂದ ಹಾದಿ ಕಷ್ಟಕರವಾಗಿದ್ದು, ಅದನ್ನು ದಾಟಿ ಬಂದ ರೀತಿ ಸ್ಪೂರ್ತಿದಾಯಕವಾಗಿರುವ ಕಾರಣ ಅವರ ಜೀವನವನ್ನು ಆಧರಿಸಿದ ಸಿನಿಮಾ ಮಾಡಲು ಪುನೀತ್​ ರಾಜ್‌ಕುಮಾರ್ ಕೂಡ ಆಸಕ್ತಿವಹಿಸಿದ್ದರು.
Photo Credit : News Kannada

ಬೆಂಗಳೂರು: ನಟ, ರಾಜಕಾರಣಿ, IAS ಅಧಿಕಾರಿ ಕೆ. ಶಿವರಾಮ್ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಬಡ ಕುಟುಂಬದಿಂದ ಬಂದ ಇವರು ಕನ್ನಡದಲ್ಲಿ IAS ಪರೀಕ್ಷೆ ಬರೆದ ಮೊದಲ ಅಧಿಕಾರಿ ಎನಿಸಿಕೊಂಡಿದ್ದಾರೆ. ಸರ್ಕಾರಿ ಕೆಲಸದಲ್ಲಿದ್ದುಕೊಂಡೇ ಓದನ್ನು ಮುಂದುವರಿಸಿದ ಇವರು, KAS ಅಧಿಕಾರಿಯಾದರೂ ನಿಲ್ಲದೆ IAS ಪರೀಕ್ಷೆಗೆ ಕುಳಿತು ತೇರ್ಗಡೆಯಾಗಿದ್ದರು.

ಕೆ. ಶಿವರಾಮ್ ನಡೆದುಬಂದ ಹಾದಿ ಕಷ್ಟಕರವಾಗಿದ್ದು, ಅದನ್ನು ದಾಟಿ ಬಂದ ರೀತಿ ಸ್ಪೂರ್ತಿದಾಯಕವಾಗಿರುವ ಕಾರಣ ಅವರ ಜೀವನವನ್ನು ಆಧರಿಸಿದ ಸಿನಿಮಾ ಮಾಡಲು ಪುನೀತ್​ ರಾಜ್‌ಕುಮಾರ್ ಕೂಡ ಆಸಕ್ತಿವಹಿಸಿದ್ದರು.

ಸಂದರ್ಶನವೊಂದರಲ್ಲಿ ಮಾತನಾಡುತ್ತ ಶಿವರಾಮ್‌, ತಮ್ಮ ಜೀವನಾಧಾರಿತ ಸಿನಿಮಾ ಬಂದರೆ ಅದರಲ್ಲಿ ಪುನೀತ್​ ರಾಜ್​ಕುಮಾರ್ ನಟಿಸಬೇಕು ಎಂಬ ಆಸೆ ವ್ಯಕ್ತಪಡಿಸಿದ್ದರು. ಇದಕ್ಕೆ ಸ್ಪಂದಿಸಿದ ಪುನೀತ್‌ ಒಪ್ಪಿಗೆ ಸೂಚಿಸಿದ್ದರು.

ಪುನೀತ್‌ ನಟನೆಯ ‘ಹುಡುಗರು’, ‘ವಂಶಿ’, ‘ರಾಮ್​’ ಹಾಗೂ ‘ಅರಸು’ ಸಿನಿಮಾಗಳನ್ನು ಕೆ. ಶಿವರಾಮ್​ ಅವರು ವಿತರಣೆ ಮಾಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು