ಬೆಂಗಳೂರು: ಇನ್ಸ್ಟಾಗ್ರಾಮ್ ಸ್ಟಾರ್ ಯೂನೀಸ್ ಝರೂರಾ ಎಂಬಾತನನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಇತ ಬೇರೆ ಬೇರೆ ದೇಶಗಳಿಗ ತೆರಳಿ ಸರ್ಪ್ರೈಸ್ ಗಿಫ್ಟ್ಗಳನ್ನು ಕೊಡುತ್ತಿದ್ದನು. ಅದರಂತೆ ಯೂನೀಸ್ ಬೆಂಗಳೂರಿನ ಎಂಜಿ ರಸ್ತೆಗೂ ಬಂದಿದ್ದನು. ಸರಿಯಾದ ಉತ್ತರ ನೀಡಿದವರಿಗೆ ದುಬಾರಿ ಬೆಲೆಯ ಐಫೋನ್ನನ್ನು ಗಿಫ್ಟ್ ಕೊಡುತ್ತಿದ್ದನು. ಅಷ್ಟೇ ಅಲ್ಲದೆ ಎಂಜಿ ರಸ್ತೆಯಲ್ಲಿ ದಿ.ಪುನೀತ್ ರಾಜ್ ಕುಮಾರ್ ಅವರ ಫೋಟೋ ಅನಾವರಣ ಮಾಡಿದ್ದನು.
ಈತ ಬಂದ ವಿಚಾರ ತಿಳಿದು ಇತನ ಅಭಿಮಾನಿಗಳು ನಡು ರಸ್ತೆಯಲ್ಲಿಯೇ ಗುಂಪು ಸೇರಿದ ಹಿನ್ನಲೆ ಸಾರ್ವಜನಿಕರಿಗೆ ತೊಂದರೆಯಾಗಿತ್ತು. ಅನುಮತಿ ಪಡೆಯದೆ ಜನರ ಗುಂಪು ಸೇರಿಸಿದ್ದ ಹಿನ್ನಲೆ ಅಶೋಕನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೊಯ್ಸಳ ವಾಹನದ ಒಳಗೆ ಕೂಡ ವೀಡಿಯೋ ಮಾಡಿದ್ದ ಇತ, ಸ್ಟೇಷನ್ ಒಳಗೆ ಫೋಟೋ ಹಾಕಿ ತೊಂದರೆಯಲ್ಲಿದ್ದಿನಿ ಎಂದು ಮೆಸೇಜ್ ಕಳಿಸಿದ್ದ. ಸದ್ಯ ವಾರ್ನ್ ಮಾಡಿ ಪೊಲೀಸರು ಬಿಟ್ಟು ಕಳಿಸಿದ್ದಾರೆ.
Ad