ಬೆಂಗಳೂರು: ಇಂಡಿಗೋ ಏರ್ಲೈನ್ಸ್ನಲ್ಲಿ ಸರ್ವರ್ ಸಮಸ್ಯೆ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್ಪೋರ್ಟ್ನಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ. ಹೌದು, ಚೆಕ್ ಇನ್ ಮತ್ತು ಚೆಕ್ ಔಟ್ ಆಗಲು ಟರ್ಮಿನಲ್ 1ರಲ್ಲಿ ನೂರಾರು ಜನ ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ.
ಚೆಕ್ಇನ್ ಸಮಸ್ಯೆ ಹಿನ್ನೆಲೆ ವಿಮಾನಗಳ ಟೇಕಾಫ್ನಲ್ಲೂ ವಿಳಂಬವಾಗಿದ್ದು, ಏರ್ಲೈನ್ಸ್ ಸಿಬ್ಬಂದಿಗಳು ಕೆಲ ವಿಮಾನಗಳನ್ನು ರಿ ಶೆಡ್ಯೂಲ್ ಮಾಡಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಸರ್ವರ್ ಸಮಸ್ಯೆ ಮುಂದುವರೆದಿದ್ದು, ಸಮಯಕ್ಕೆ ಸರಿಯಾಗಿ ಪ್ರಯಾಣ ಮಾಡಲಾಗದೆ ಪ್ರಯಾಣಿಕರು ಕಂಗಾಲಾಗಿದ್ದಾರೆ.
Ad