Bengaluru 24°C
Ad

ಸಿಲಿಕಾನ್ ಸಿಟಿಯಲ್ಲಿ ಧಾರಾಕಾರ ಮಳೆ: ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ

ನಿನ್ನೆ ಸಂಜೆಯಿಂದ ರಾತ್ರಿವರೆಗೂ ಸುರಿದ ಧಾರಾಕಾರ ಮಳೆಗೆ ಸಿಲಿಕಾನ್ ಸಿಟಿ ಜನ ಬೆಚ್ಚಿ ಬಿದ್ದಿದ್ದಾರೆ. ಬೆಂಗಳೂರಲ್ಲಿ ನಿನ್ನೆ 133 ವರ್ಷಗಳ ಹಿಂದಿನ ಜೂನ್ ತಿಂಗಳ ದಾಖಲೆಯನ್ನು ಮಳೆರಾಯ ಮುರಿದಿದ್ದಾನೆ. ಕೇವಲ 24 ಗಂಟೆಯಲ್ಲಿ ಬೆಂಗಳೂರಲ್ಲಿ 101.5 ಮಿಲಿಮೀಟರ್ ಮಳೆ ಸುರಿದಿದೆ.

ಬೆಂಗಳೂರು: ನಿನ್ನೆ ಸಂಜೆಯಿಂದ ರಾತ್ರಿವರೆಗೂ ಸುರಿದ ಧಾರಾಕಾರ ಮಳೆಗೆ ಸಿಲಿಕಾನ್ ಸಿಟಿ ಜನ ಬೆಚ್ಚಿ ಬಿದ್ದಿದ್ದಾರೆ. ಬೆಂಗಳೂರಲ್ಲಿ ನಿನ್ನೆ 133 ವರ್ಷಗಳ ಹಿಂದಿನ ಜೂನ್ ತಿಂಗಳ ದಾಖಲೆಯನ್ನು ಮಳೆರಾಯ ಮುರಿದಿದ್ದಾನೆ. ಕೇವಲ 24 ಗಂಟೆಯಲ್ಲಿ ಬೆಂಗಳೂರಲ್ಲಿ 101.5 ಮಿಲಿಮೀಟರ್ ಮಳೆ ಸುರಿದಿದೆ.

ಬೆಂಗಳೂರಲ್ಲಿ ನಿನ್ನೆ ಒಂದೇ ದಿನ ಒಂದು ತಿಂಗಳು ಸುರಿಯುವಷ್ಟು ಮಳೆ ಸುರಿದಿದೆ. ಜೂನ್ ತಿಂಗಳ ಎರಡೇ ದಿನದಲ್ಲಿ ಒಟ್ಟಾರೆ 141 ಮಿಲಿ ಮೀಟರ್ ಮಳೆ ಆಗಿದೆ. ಸುಮಾರು 50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಿದೆ.

ಇದಿಷ್ಟು ನಿನ್ನೆ ಸಿಲಿಕಾನ್ ಸಿಟಿಯಲ್ಲಿ ಕಂಡು ಬಂದ ವರುಣನ ಅಬ್ಬರವಾದ್ರೆ, ಇಂದೂ ಕೂಡ ಮಳೆರಾಯನ ಆರ್ಭಟ ಮುಂದುವರಿಯಲಿದೆ. ನೈಋತ್ಯ ಮುಂಗಾರು ಮಾರುತ ಜೋರಾಗಿದ್ದು ಧಾರಾಕಾರ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಈಗಾಗಲೇ ನೈಋತ್ಯ ಮುಂಗಾರು ಕರ್ನಾಟಕದ ಕೆಲವು ಭಾಗಗಳಿಗೆ ಪ್ರವೇಶಿಸಿದೆ. ಮುಂದಿನ 4-5 ದಿನಗಳಲ್ಲಿ ಕರ್ನಾಟಕದ ಉಳಿದ ಭಾಗಗಳಿಗೆ ನೈಋತ್ಯ ಮುಂಗಾರು ಮತ್ತಷ್ಟು ಆವರಿಸಿಕೊಳ್ಳಲಿದೆ. ರಾಜ್ಯದಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

 

Ad
Ad
Nk Channel Final 21 09 2023
Ad