Bengaluru 28°C
Ad

10 ದಿನದಲ್ಲಿ ಚಿನ್ನ, ಬೆಳ್ಳಿ ಬೆಲೆ ತುಸು ಇಳಿಕೆ: ಇವತ್ತಿನ ದರಪಟ್ಟಿ ಹೀಗಿದೆ

ಕಳೆದ ಎರಡು ಮೂರು ದಿನದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ ಆಗಿದೆ. ಆದರೆ, ಕಳೆದ 10 ದಿನಗಳ ಬೆಲೆ ಪರಿಗಣಿಸಿದರೆ ಇಳಿಮುಖವಾಗಿದೆ.

ಬೆಂಗಳೂರು:  ಕಳೆದ ಎರಡು ಮೂರು ದಿನದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ ಆಗಿದೆ. ಆದರೆ, ಕಳೆದ 10 ದಿನಗಳ ಬೆಲೆ ಪರಿಗಣಿಸಿದರೆ ಇಳಿಮುಖವಾಗಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 67,600 ರೂಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 73,750 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,600 ರೂಪಾಯಿ ಇದೆ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಬೆಂಗಳೂರು: 67,600 ರೂ, ಚೆನ್ನೈ: 68,400 ರೂ
ಮುಂಬೈ: 67,600 ರೂ, ದೆಹಲಿ: 67,750 ರೂ, ಕೋಲ್ಕತಾ: 67,600 ರೂ, ಕೇರಳ: 67,600 ರೂ, ಅಹ್ಮದಾಬಾದ್: 67,650 ರೂ, ಜೈಪುರ್: 67,750 ರೂ, ಲಕ್ನೋ: 67,750 ರೂ, ಭುವನೇಶ್ವರ್: 67,600 ರೂ ಇದೆ.

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಮಲೇಷ್ಯಾ: 3,500 ರಿಂಗಿಟ್ (62,210 ರೂಪಾಯಿ ), ದುಬೈ: 2,622.50 ಡಿರಾಮ್ (59,540 ರೂಪಾಯಿ ), ಅಮೆರಿಕ: 725 ಡಾಲರ್ (60,460 ರೂಪಾಯಿ ), ಸಿಂಗಾಪುರ: 996 ಸಿಂಗಾಪುರ್ ಡಾಲರ್ (61,760 ರೂಪಾಯಿ ), ಕತಾರ್: 2,710 ಕತಾರಿ ರಿಯಾಲ್ (61,980 ರೂಪಾಯಿ ), ಸೌದಿ ಅರೇಬಿಯಾ: 2,730 ಸೌದಿ ರಿಯಾಲ್ (60,700 ರೂಪಾಯಿ ), ಓಮನ್: 288.50 ಒಮಾನಿ ರಿಯಾಲ್ (62,490 ರೂಪಾಯಿ ), ಕುವೇತ್: 225.50 ಕುವೇತಿ ದಿನಾರ್ (61,400 ರೂಪಾಯಿ ) ಆಗಿದೆ.

ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ಈ ವರ್ಷದಲ್ಲಿ (2024ರ ಅಂತ್ಯಕ್ಕೆ) ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.

 

Ad
Ad
Nk Channel Final 21 09 2023
Ad