News Karnataka Kannada
Thursday, May 02 2024
ಬೆಂಗಳೂರು

ತಡರಾತ್ರಿ 1 ಗಂಟೆ ತನಕ ಹೊಟೇಲ್ ಓಪನ್ ಗೆ ಅವಕಾಶ: ಗ್ರಾಹಕರು ಖುಷ್

ಬಜೆಟ್ ನಲ್ಲಿ ವ್ಯಾಪಾರ, ವಾಣಿಜ್ಯ ಅಭಿವೃದ್ಧಿ ಉದ್ದೇಶದಿಂದ ತಡರಾತ್ರಿ 1 ಗಂಟೆ ತನಕ ಹೊಟೇಲ್ ಓಪನ್ ಗೆ ಅವಕಾಶ ನೀಡಿರೋದಕ್ಕೆ ಹೊಟೇಲ್ ಮಾಲೀಕರು, ಗ್ರಾಹಕರು ಖುಷ್ ಆಗಿದ್ದಾರೆ. ಆದರೆ ಈಗ 24 ಗಂಟೆ ವ್ಯಾಪಾರ ಅನುಮತಿಗೆ ಆಗ್ರಹ ಕೇಳಿ ಬಂದಿದೆ.
Photo Credit : News Kannada

ಬೆಂಗಳೂರು: ಬಜೆಟ್ ನಲ್ಲಿ ವ್ಯಾಪಾರ, ವಾಣಿಜ್ಯ ಅಭಿವೃದ್ಧಿ ಉದ್ದೇಶದಿಂದ ತಡರಾತ್ರಿ 1 ಗಂಟೆ ತನಕ ಹೊಟೇಲ್ ಓಪನ್ ಗೆ ಅವಕಾಶ ನೀಡಿರೋದಕ್ಕೆ ಹೊಟೇಲ್ ಮಾಲೀಕರು, ಗ್ರಾಹಕರು ಖುಷ್ ಆಗಿದ್ದಾರೆ. ಆದರೆ ಈಗ 24 ಗಂಟೆ ವ್ಯಾಪಾರ ಅನುಮತಿಗೆ ಆಗ್ರಹ ಕೇಳಿ ಬಂದಿದೆ.

ರಾಜ್ಯದಲ್ಲಿ ತಡರಾತ್ರಿ 1 ಗಂಟೆ ತನಕ ವ್ಯಾಪಾರ, ವಹಿವಾಟಿಗೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ವ್ಯಾಪಾರ, ವಾಣಿಜ್ಯ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡಿರೋ ಪ್ಲಾನ್ ಗೆ ಸಿಲಿಕಾನ್ ಸಿಟಿ ಮಂದಿ ಫುಲ್ ಖುಷ್ ಆಗಿದ್ದಾರೆ. ಮೊದಲೆಲ್ಲ ರಾತ್ರಿ 10 ,11 ಗಂಟೆಗೆ ಹೊಟೇಲ್ ಬಂದ್ ಆಗ್ತಿದ್ದರಿಂದ ಪರದಾಡ್ತಿದ್ದ ಜನರು, ಇದೀಗ 1 ಗಂಟೆ ತನಕ ಅವಕಾಶ ಕೊಟ್ಟಿರೋದಕ್ಕೆ ಸಂತಸ ವ್ಯಕ್ತಪಡಿಸ್ತಿದ್ದಾರೆ.

ಸದ್ಯ ರಾತ್ರಿ 1 ಗಂಟೆ ತನಕ ವ್ಯಾಪಾರಕ್ಕೆ ಅವಕಾಶ ನೀಡೋ ಮೂಲಕ ಸರ್ಕಾರ, ವಾಣಿಜ್ಯ ಚಟುವಟಿಕೆಗಳ ಅಭಿವೃದ್ಧಿ ಜೊತೆಗೆ ಆದಾಯ ಹೆಚ್ಚಳಕ್ಕೂ ಪ್ಲಾನ್ ಮಾಡಿದೆ.

ಇನ್ನು ಈ ಹಿಂದೆ 24 ಗಂಟೆಗಳ ಕಾಲ ವ್ಯಾಪಾರಕ್ಕೆ ಅವಕಾಶ ಕೋರಿ ಹೊಟೇಲ್ ಮಾಲೀಕರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ರು. ಆದ್ರೆ ಸರ್ಕಾರ ಮಾತ್ರ ಈ ಮನವಿಗೆ ಪುರಸ್ಕಾರ ಕೊಡದೇ ಇರೋದಕ್ಕೆ ಹೊಟೇಲ್ ಮಾಲೀಕರು ಅಸಮಾಧಾನ ಹೊರಹಾಕ್ತಿದ್ದಾರೆ. ಇಡೀ ರಾತ್ರಿ ವ್ಯಾಪಾರಕ್ಕೆ ಅವಕಾಶ ಕೊಟ್ಟರೇ ವಾಣಿಜ್ಯ ಚಟುವಟಿಕೆಗಳ ಅಭಿವೃದ್ಧಿ ಜೊತೆಗೆ ಕ್ರೈಂ ರೇಟ್ ಕೂಡ ಕಡಿಮೆಯಾಗುತ್ತೆ, ಸರ್ಕಾರ ಈ ಬಗ್ಗೆ ಗಮನಹರಿಸಲಿ ಅಂತಾ ಹೊಟೇಲ್ ಮಾಲೀಕರು ಆಗ್ರಹಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು