Bengaluru 21°C
Ad

ಫ್ರಿಡ್ಜ್​ನಲ್ಲಿ 32 ತುಂಡಾಗಿದ್ದಳು ಮಹಾಲಕ್ಷ್ಮೀ: ರಕ್ತ ಸೋರಿ ಹುಳ ಆಗಿ ವಾಸನೆ ಬಂದಿತ್ತು !

Bng

ಬೆಂಗಳೂರು: ನಗರದಲ್ಲಿ ದೆಹಲಿಯ ಶ್ರದ್ಧಾ ಮಾದರಿಯಲ್ಲಿ ಘನಘೋರ ಹತ್ಯೆ ನಡೆದಿದೆ. ವೈಯಾಲಿಕಾವಲ್ ಬಳಿಯ ಮುನೇಶ್ವರ ಬ್ಲಾಕ್​​ನ ಮನೆಯೊಂದರಲ್ಲಿ ಮಹಿಳೆಯನ್ನು ಕೊಲೆಗೈದು ದೇಹವನ್ನು 32 ಭಾಗಗಳಾಗಿ ಕತ್ತರಿಸಿ 165 ಲೀಟರ್​ನ ದೊಡ್ಡ ಫ್ರಿಡ್ಜ್​​ನಲ್ಲಿಟ್ಟು ಕಿರಾತಕ ಎಸ್ಕೇಪ್​ ಆಗಿದ್ದಾನೆ. ಕಳೆದ 20 ದಿನಗಳ ಹಿಂದೆಯೇ ಘಟನೆ ನಡೆದಿದೆ ಎನ್ನಲಾಗಿದೆ. ಈಗ ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಮಹಾಲಕ್ಷ್ಮೀ ದೇಹದ ಹಲವು ಭಾಗಗಳು ಪತ್ತೆಯಾಗಿದ್ದು, ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಮಹಾಲಕ್ಷ್ಮೀ ಎಂಬ ಮಹಿಳೆಯನ್ನ ಕೊಂದಿರೋ ಹಂತಕ 32 ಪೀಸ್ ಮಾಡಿ ಫ್ರಿಡ್ಜ್‌ಗಿಟ್ಟು ಎಸ್ಕೇಪ್ ಆಗಿದ್ದಾನೆ. ಇದೀಗ ಮಹಿಳೆ ದೇಹದ ಒಟ್ಟು 28 ಭಾಗಗಳನ್ನ ಪೊಲೀಸರು ಪತ್ತೆಹಚ್ಚಿದ್ದಾರೆ. ದೇಹದ ಭಾಗಗಳ ಅಳತೆ, ಮೂಳೆ ಸ್ಯಾಂಪಲ್ ಪಡೆದು ಮರಣೋತ್ತರ ಪರೀಕ್ಷೆ ನಡೆಸಲು ಬೌರಿಂಗ್​ ಆಸ್ಪತ್ರೆಗೆ ರವಾನಿಸಿದ್ದಾರೆ. ಇಂದು ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಬಳಿಕ ಮೃತದೇಹವನ್ನ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಿದ್ದಾರೆ. ಇನ್ನೂ ಮಹಾಲಕ್ಷ್ಮೀಯನ್ನ ಕೊಂದಿದ್ದ ಹಂತಕ ಫ್ರಿಡ್ಜ್‌ನಲ್ಲಿ ಇಟ್ಟು ಆನ್‌ ಮಾಡಿ ಎಸ್ಕೇಪ್ ಆಗಿದ್ದ.

ಮಹಾಲಕ್ಷ್ಮಿಯನ್ನ ಕೊಂದು ಕ್ರೂರ ಹಂತಕ ಫ್ರಿಡ್ಜ್‌ನಲ್ಲಿ ಇಟ್ಟಿದ್ದ. ದೇಹದ ಪೀಸ್​ಗಳನ್ನ ನೀಟಾಗಿ ಜೋಡಿಸಿ ಫ್ರಿಡ್ಜ್ ಆನ್ ಮಾಡಿದ್ದ. ಫ್ರಿಡ್ಜ್​ ಆನ್​ ಇದ್ದ ಕಾರಣ ದೇಹದ ಭಾಗಗಳು ಕೊಳೆಯುವ ಹಂತಕ್ಕೆ ಹೋಗಿರಲಿಲ್ಲ. ಕರೆಂಟ್ ಹೋದ ವೇಳೆ ಒಂದಷ್ಟು ರಕ್ತ ಫ್ರಿಡ್ಜ್​ನಿಂದ ಕೆಳಗೆ ಸೋರಿದೆ. ರಕ್ತ ಸೋರಿದ ಬಳಿಕ ಹುಳ ಆಗಿ ವಾಸನೆ ಬರೋಕೆ ಶುರು ಆಗಿದ್ದು, ಬಳಿಕ ಕೊಲೆ ಪ್ರಕರಣ ಬಯಲಾಗಿದೆ. ಮಹಾಲಕ್ಷ್ಮೀ ಕೊಲೆಗೈದಿರೋ ಕೊಲೆಗಾರ ಯಾರು ಅನ್ನೋದು ಸದ್ಯ ಪತ್ತೆಯಾಗಿಲ್ಲ. ಆಕೆಯ ಮೊಬೈಲ್‌ಗೆ ಬಂದಿರೋ ಕರೆಗಳ ಮಾಹಿತಿ ಪಡೆದು ಪೊಲೀಸರು ಕೆಲವರನ್ನ ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೇ ಕೊಲೆಗಾರನ ಬಂಧನಕ್ಕೆ ಎಂಟು ಪೊಲೀಸರ ತಂಡ ರಚನೆ ಮಾಡಲಾಗಿದೆ. ವೈಯಾಲಿ ಕಾವಲ್, ಶೇಷಾದ್ರಿಪುರಂ, ಹೈಗ್ರೌಂ ಡ್ಸ್ ಠಾಣೆ ಸಿಬ್ಬಂದಿ ತನಿಖೆಗೆ ಇಳಿದಿದ್ದಾರೆ. ಸದ್ಯ ಪ್ರಾಥಮಿಕ ಮಾಹಿತಿ ಪಡೆದು ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಅನೈತಿಕ ಸಂಬಂಧದಿಂದ ಕೊಲೆ ನಡೆದಿರಬಹುದು ಎಂಬ ಶಂಕೆಯಿದೆ.

Ad
Ad
Nk Channel Final 21 09 2023