ಬೆಂಗಳೂರು: ಹಾಲೋ ಬ್ಲಾಕ್ ತುಂಬಿದ್ದ ಟೆಂಪೋ ಬೈಕ್ ಮೇಲೆ ಪಲ್ಟಿಯಾಗಿ ಮೂವರು ಮೃತಪಟ್ಟಿರುವ ಘಟನೆ ರಾಜ್ಯ ಗಡಿಭಾಗ ತಮಿಳುನಾಡಿನ ಡೆಂಕಣಿಕೋಟೆ ಬಳಿಯ ಅಂಚೆಟ್ಟಿ ರಸ್ತೆಯಲ್ಲಿ ನಡೆದಿದೆ.
ಘಟನೆಯಲ್ಲಿ ಓರ್ವನಿಗೆ ಗಂಭೀರ ಗಾಯಗಳಾಗಿವೆ. ಟೆಂಪೋ ಬೈಕ್ ಮೇಲೆ ಪಲ್ಟಿಯಾಗಿದ ಪರಿಣಾಮ ಬೈಕ್ನಲ್ಲಿ ತೆರಳುತ್ತಿದ್ದ ಮಾದೇಶ್ ಹಾಗೂ ಜಯಲಕ್ಷ್ಮೀ ದಂಪತಿ ಮತ್ತು ಟೆಂಪೋದಲ್ಲಿದ್ದ ಕೂಲಿ ಕಾರ್ಮಿಕ ಗೋವಿಂದ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆ ರಸ್ತೆಯ ತಿರುವಿನಲ್ಲಿ ನಡೆದಿದ್ದು, ಡೆಂಕಣಿಕೋಟೆ ಸರ್ಕಾರಿ ಆಸ್ಪತ್ರೆಗೆ ಮೃತದೇಹಗಳನ್ನು ರವಾನಿಸಲಾಗಿದ್ದು ಗಾಯಾಳುಗೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಂಚೆಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Ad