Bengaluru 24°C
Ad

ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಒಳನಾಡಿನಲ್ಲಿ ಧಾರಾಕಾರ ಮಳೆ

ಕರ್ನಾಟಕದ ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಒಳನಾಡಿನಲ್ಲಿ ಇಂದಿನಿಂದ ಧಾರಾಕಾರ ಮಳೆ ಸುರಿಯಲಿದ್ದು ರೆಡ್​ ಅಲರ್ಟ್​ ಘೋಷಿಸಲಾಗಿದೆ.

ಬೆಂಗಳೂರು: ಕರ್ನಾಟಕದ ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಒಳನಾಡಿನಲ್ಲಿ ಇಂದಿನಿಂದ ಧಾರಾಕಾರ ಮಳೆ ಸುರಿಯಲಿದ್ದು ರೆಡ್​ ಅಲರ್ಟ್​ ಘೋಷಿಸಲಾಗಿದೆ.

ಬಾಗಲಕೋಟೆ, ಹಾವೇರಿ ಜಿಲ್ಲೆಗಳಲ್ಲಿ  ಬೆಳಗಾವಿ, ಧಾರವಾಡ, ಗದಗ,ಕೊಪ್ಪಳ, ರಾಯಚೂರು, ವಿಜಯಪುರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಆರೆಂಜ್​ ಹಾಗೂ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಶಿವಮೊಗ್ಗ, ಹಾಸನ, ತುಮಕೂರು, ವಿಜಯಪುರ, ಮೈಸೂರು, ರಾಮನಗರ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಮಗಳೂರಿನಲ್ಲೂ ಸಾಧಾರಣ ಮಳೆಯಾಗಲಿದೆ.

ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು ಸಂಜೆ ವೇಳೆ ಮಳೆಯಾಗುವ ಸಾಧ್ಯತೆ ಇದೆ.

ತಾಳಿಕೋಟೆಯಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಎಚ್​ಡಿ ಕೋಟೆ, ಗೋಕಾಕ, ಬೈಲಹೊಂಗಲ, ಬಾದಾಮಿ, ಶಿವಮೊಗ್ಗ, ಆಗುಂಬೆ, ಮಂಕಿ, ಚಿಂತಾಮಣಿ, ನಾಯಕನಹಟ್ಟಿ, ನರಗುಂದ, ಹುಣಸಗಿ, ಹೊನ್ನಾಳಿ, ಸಿದ್ದಾಪುರ, ಲೋಕಾಪುರ, ಆಲಮಟ್ಟಿ, ಹಿಡಕಲ್ ಅಣೆಕಟ್ಟು, ಬೇಗೂರು, ದೇವನಹಳ್ಳಿ, ಮಾಗಡಿ, ಹೊಸಕೋಟೆಯಲ್ಲಿ ಮಳೆಯಾಗಿದೆ.

ಪರಶುರಾಂಪುರ, ಮೂರ್ನಾಡು, ಗುಂಡ್ಲುಪೇಟೆ, ಅಗ್ರಹಾರ, ಕೊಟ್ಟೂರು, ಕಿರವತ್ತಿ, ಹಾವೇರಿ, ನಿಪ್ಪಾಣಿ, ಬಾಗಲಕೋಟೆ, ಬೇವೂರು, ಕೋಲಾರ, ದೊಡ್ಡಬಳ್ಳಾಪುರ, ರಾಮನಗರ, ನಾರಾಯಣಪುರ, ಮಧುಗಿರಿ, ಹಗರಿಬೊಮ್ಮನಹಳ್ಳಿ, ಹಡಗಲಿ, ಶ್ರೀರಂಗಪಟ್ಟಣ, ಮಸ್ಕಿ, ಮುಂಡಗೋಡು, ಕುಶಾಲನಗರ, ಕಮ್ಮರಡಿ, ಕಂಪ್ಲಿ, ಬೆಳ್ಳೂರು, ತಿಪಟೂರು, ಮದ್ದೂರು, ಲಿಂಗಸುಗೂರು, ಸಂಕೇಶ್ವರ, ಚಿಂಚೋಳಿ, ಕಮಲಾಪುರ, ಸೇಡಬಾಳ, ಮುನಿರಾಬಾದ್,  ಇಳಕಲ್, ಧಾರವಾಡ, ಕೆಂಭಾವಿಯಲ್ಲಿ ಮಳೆಯಾಗಿದೆ.

Ad
Ad
Nk Channel Final 21 09 2023
Ad