ಬೆಂಗಳೂರು: ಕನ್ನಡ ಬಿಗ್‌ಬಾಸ್ ಸೀಸನ್ 11 ಶುರುವಾಗಿದೆ. ಭಾರೀ ಕುತೂಹಲ ಮೂಡಿಸಿರುವ ಈ ಒಂದು ಶೋ ಈ ಬಾರಿ ಭಾರೀ ಇಂಟ್ರೆಸ್ಟಿಂಗ್ ಕಂಟೆಸ್ಟೆಂಟ್ಗಳನ್ನು ಹೊಂದಿದೆ. ಕಳೆದ ಎಲ್ಲ ಬಿಗ್‌ಬಾಸ್ ಸೀಸನ್ಗಳಿಗೆ ಉತ್ತಮ ರೆಸ್ಪಾನ್ಸ್ ಕೂಡಾ ಬರುತ್ತಿದ್ದು ಈ ಸಲ ಯಾವ ರೀತಿ ಬರುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಈಗಾಗಲೇ 17 ಜನ ಕಂಟೆಸ್ಟೆಂಟ್ಸ್ ಬಿಗ್‌ಬಾಸ್ ಮನೆಗೆ ಕಾಲಿಟ್ಟಿದ್ದಾರೆ.
ಗೌತಮಿಯ ಹೇರ್ಸ್ಟೈಲ್ ರಿವೀಲ್
ನಟಿ ಗೌತಮಿ ಜಾಧವ್ ಅವರು ಸತ್ಯ ಸೀರಿಯಲ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಖ್ಯಾತ ನಟಿ ಗೌತಮಿ ಅವರು ಈಗ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು, ಸಖತ್ ಆಗಿ ಸುದ್ದಿ ಮಾಡುತ್ತಿದ್ದಾರೆ. ನಟಿ ಈಗ ಬಿಗ್‌ಬಾಸ್ ಮನೆಯಲ್ಲಿ ತಮ್ಮ ರಿಯಲ್ ಲುಕ್ ರಿವೀಲ್ ಮಾಡಿದ್ದಾರೆ.ಗೌತಮಿಯ ಹೊಸ ಅಧ್ಯಾಯ ಇಲ್ಲಿ ಶುರುವಾಗುತ್ತಿದೆ ಎಂದು ಸತ್ಯ ಸೀರಿಯಲ್ ಖ್ಯಾತಿಯ ಗೌತಮಿ ಜಾಧವ್ ಅವರು ತಮ್ಮ ರಿಯಲ್ ಹೇರ್ಸ್ಟೈಲ್ ರಿವೀಲ್ ಮಾಡಿದ್ದಾರೆ.
ಈ ಬಾರಿಯ ಬಿಗ್‌ಬಾಸ್ ಕೊಂಚ ಆಸಕ್ತಿದಾಯಕವಾಗಿದೆ. ಏಕೆಂದರೆ ಈಗ ಬಂದಿರುವ ಸ್ಪರ್ಧಿಗಳು ಈಗಾಗಲೇ ಎಲ್ಲರಿಗೂ ಪರಿಚಿತರು. ಆದ್ದರಿಂದ ಎಲ್ಲರಲ್ಲೂ ಹೆಚ್ಚು ಕು