ಬೆಂಗಳೂರು: ಇತ್ತೀಚೆಗೆ ಬಹು ಮೌಲ್ಯದ ಚಿನ್ನಗಳನ್ನು ವಿಚಿತ್ರವಾಗಿ ಇಟ್ಟುಗೊಂಡು ಸಾಗುತ್ತಾರೆ. ಭದ್ರತಾ ವ್ಯವಸ್ಥೆ ಬಗ್ಗೆ ತಿಳಿದಿದ್ದರೂ ನಿರಾಕರೀಸಿ ಅಕ್ರಮವಾಗಿ ಸಾಗಿಸುತ್ತಾರೆ. ಇದೀಗ ಅಂತಹದ್ದೇ ಘಟನೆ ನಡೆದಿದ್ದು, ವಿದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ 4.77 ಕೋಟಿ ರೂ. ಮೌಲ್ಯದ ಚಿನ್ನವನ್ನು ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಏರ್ಪೋರ್ಟ್ನಲ್ಲಿ ಜಪ್ತಿ ಮಾಡಲಾಗಿದೆ. ಬ್ಯಾಂಕಾಕ್ನಿಂದ ಬೆಂಗಳೂರಿಗೆ ಥಾರ್ ಏರ್ ವೇಸ್ ವಿಮಾನದಲ್ಲಿ ಭಾಗಮಿಸಿದ್ದ ಇಬ್ಬರು ಪ್ರಯಾಣಿಕರ ಪ್ರಯಾಣಿಸಿದ್ದು ಅಕ್ರಮವಾಗಿ ಹ್ಯಾಂಡ್ ಬ್ಯಾಗ್ನಲ್ಲಿ ಮುಚ್ಚಿಟ್ಟು ಚಿನ್ನ ಸಾಗಾಟಕ್ಕೆ ಯತ್ನಿಸಿದ್ದಾರೆ. ಸದ್ಯ ಡಿಆರ್ಐ ಬೆಂಗಳೂರು ಅಧಿಕಾರಿಗಳು ಕಾರ್ಯಾಚರಣೆ ಮಾಡಿ ಇಬ್ಬರನ್ನ ಬಂಧಿಸಿ 6 ಕೆಜಿ 834 ಗ್ರಾಂ ಚಿನ್ನ ಸೀಜ್ ಮಾಡಿದ್ದಾರೆ.
Ad
Ad