Bengaluru 26°C
Ad

ಮತ್ತೆ ತುಸು ಇಳಿಕೆ ಕಂಡ ಚಿನ್ನ: ಇವತ್ತಿನ ದರಪಟ್ಟಿ ಹೀಗಿದೆ

ಕಳೆದ ಹತ್ತು ದಿನದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು  ಸಾಕಷ್ಟು ಇಳಿದಿವೆ. ಇವತ್ತೂ ಕೂಡ ತುಸು ಇಳಿಕೆ ಆಗಿದೆ. ಈ ಕಾರಣಕ್ಕೆ ಚಿನ್ನದ ಬೆಲೆಯಲ್ಲಿ ಸ್ವಲ್ಪಮಟ್ಟಿಗೆ ಇಳಿಕೆ ಕಾಣುತ್ತಿರಬಹುದು ಎಂದು ಹೇಳಲಾಗುತ್ತಿದೆ.

ಬೆಂಗಳೂರು: ಕಳೆದ ಹತ್ತು ದಿನದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು  ಸಾಕಷ್ಟು ಇಳಿದಿವೆ. ಇವತ್ತೂ ಕೂಡ ತುಸು ಇಳಿಕೆ ಆಗಿದೆ. ಈ ಕಾರಣಕ್ಕೆ ಚಿನ್ನದ ಬೆಲೆಯಲ್ಲಿ ಸ್ವಲ್ಪಮಟ್ಟಿಗೆ ಇಳಿಕೆ ಕಾಣುತ್ತಿರಬಹುದು ಎಂದು ಹೇಳಲಾಗುತ್ತಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 65,700 ರೂಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 71,670 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,150 ರೂಪಾಯಿ ಇದೆ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):ಬೆಂಗಳೂರು: 65,700 ರೂ, ಚೆನ್ನೈ: 66,500 ರೂ, ಮುಂಬೈ: 65,700 ರೂ, ದೆಹಲಿ: 65,850 ರೂ, ಕೋಲ್ಕತಾ: 65,700 ರೂ, ಕೇರಳ: 65,700 ರೂ, ಅಹ್ಮದಾಬಾದ್: 65,750 ರೂ
ಜೈಪುರ್: 65,850 ರೂ, ಲಕ್ನೋ: 65,850 ರೂ, ಭುವನೇಶ್ವರ್: 65,700 ರೂ ಇದೆ.

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):ಮಲೇಷ್ಯಾ: 3,450 ರಿಂಗಿಟ್ (61,440 ರೂಪಾಯಿ ), ದುಬೈ: 2,572.50 ಡಿರಾಮ್ (58,500 ರೂಪಾಯಿ ), ಅಮೆರಿಕ: 700 ಡಾಲರ್ (58,470 ರೂಪಾಯಿ ), ಸಿಂಗಾಪುರ: 973 ಸಿಂಗಾಪುರ್ ಡಾಲರ್ (60,100 ರೂಪಾಯಿ ), ಕತಾರ್: 2,625 ಕತಾರಿ ರಿಯಾಲ್ (60,130 ರೂಪಾಯಿ ) ಸೌದಿ ಅರೇಬಿಯಾ: 2,640 ಸೌದಿ ರಿಯಾಲ್ (58,790 ರೂಪಾಯಿ ), ಓಮನ್: 277.50 ಒಮಾನಿ ರಿಯಾಲ್ (60,210 ರೂಪಾಯಿ ), ಕುವೇತ್: 218 ಕುವೇತಿ ದಿನಾರ್ (59,390 ರೂಪಾಯಿ ) ಆಗಿದೆ.

ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ಈ ವರ್ಷದಲ್ಲಿ (2024ರ ಅಂತ್ಯಕ್ಕೆ) ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.

Ad
Ad
Nk Channel Final 21 09 2023
Ad