ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆ ಇಂದು ಹೆಚ್ಚಳವಾಗಿದೆ. ಚಿನ್ನದ ಬೆಲೆ ಸತತ ಏರಿಕೆ ಕಂಡಿದೆ. ನಿನ್ನೆ ತುಸು ಕಡಿಮೆ ಆಗಿದ್ದ ಬೆಳ್ಳಿ ಬೆಲೆ ಇಂದು ಗಣನೀಯವಾಗಿ ಹೆಚ್ಚಿದೆ. ಚಿನ್ನದ ಬೆಲೆ ಗ್ರಾಮ್ಗೆ 35 ರೂನಷ್ಟು ಹೆಚ್ಚಾಗಿದೆ.
ಎರಡು ದಿನದಲ್ಲಿ ಗ್ರಾಮ್ಗೆ 55 ರೂ ಬೆಲೆ ಹೆಚ್ಚಳವಾಗಿದೆ. ಬೆಳ್ಳಿ ಬೆಲೆ ಇಂದು ಗ್ರಾಮ್ಗೆ 30 ಪೈಸೆಯಷ್ಟು ಹೆಚ್ಚಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 61,700 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 67,310 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,750 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 61,700 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,590 ರೂಪಾಯಿಯಲ್ಲಿ ಇದೆ.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಬೆಂಗಳೂರು: 61,700 ರೂ., ಚೆನ್ನೈ: 62,500 ರೂ., ಮುಂಬೈ: 61,700 ರೂ., ದೆಹಲಿ: 61,850 ರೂ., ಕೋಲ್ಕತಾ: 61,700 ರೂ., ಕೇರಳ: 61,700 ರೂ., ಅಹ್ಮದಾಬಾದ್: 61,750 ರೂ., ಜೈಪುರ್: 61,850 ರೂ., ಲಕ್ನೋ: 61,850 ರೂ., ಭುವನೇಶ್ವರ್: 61,700 ರೂಪಾಯಿದೆ.