ಬೆಂಗಳೂರು: ಜಾಗತಿಕವಾಗಿ ಚಿನ್ನದ ಬೆಲೆ ಏರಿಕೆ ಮುಂದುವರಿದಿದೆ. ಬೆಳ್ಳಿ ಬೆಲೆ ಏರಿಕೆಗೆ ಅಲ್ಪವಿರಾಮ ಸಿಕ್ಕಿದೆ. ಕಳೆದ ಮೂರು ವಾರಗಳಿಂದ ಚಿನ್ನದ ಬೆಲೆ ಬಹುತೇಕ ನಿರಂತರವಾಗಿ ಏರುತ್ತಿದೆ. ಜೂನ್ 29ರಂದು 10 ಗ್ರಾಮ್ಗೆ 53,850 ರೂ ಇದ್ದ ಚಿನ್ನದ ಬೆಲೆ ಈಗ 55,700 ರೂ ಗಡಿ ದಾಟಿದೆ. 20 ದಿನದಲ್ಲಿ 850 ರೂನಷ್ಟು ಬೆಲೆ ಏರಿಕೆಯಾಗಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 55,700 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 60,750ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,840 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 55,700 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,785 ರೂಪಾಯಿಯಲ್ಲಿ ಇದೆ.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಬೆಂಗಳೂರು: 55,700 ರೂ., ಚೆನ್ನೈ: 56,100 ರೂ., ಮುಂಬೈ: 55,700 ರೂ., ದೆಹಲಿ: 55,850 ರೂ., ಕೋಲ್ಕತಾ: 55,700 ರೂ., ಕೇರಳ: 55,700 ರೂ., ಅಹ್ಮದಾಬಾದ್: 55,750 ರೂ., ಜೈಪುರ್: 55,850 ರೂ., ಲಕ್ನೋ: 55,850 ರೂ., ಭುವನೇಶ್ವರ್: 55,700 ರೂಪಾಯಿಯಲ್ಲಿ ಇದೆ.
ಇನ್ನು ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಬೆಂಗಳೂರು: 7,785 ರೂ., ಚೆನ್ನೈ: 8,200 ರೂ., ಮುಂಬೈ: 7,840 ರೂ., ದೆಹಲಿ: 7,840 ರೂ., ಕೋಲ್ಕತಾ: 7,840 ರೂ., ಕೇರಳ: 8,200 ರೂ., ಅಹ್ಮದಾಬಾದ್: 7,840 ರೂ., ಜೈಪುರ್: 7,840 ರೂ., ಲಕ್ನೋ: 7,840 ರೂ., ಭುವನೇಶ್ವರ್: 8,200 ರೂಪಾಯಿಯಿದೆ