ದೇಶದಲ್ಲಿ ಚಿನ್ನದ ಬೆಲೆ ಗ್ರಾಮ್​ಗೆ 15 ರೂನಷ್ಟು ಏರಿಕೆ

ಬೆಂಗಳೂರು: ಭಾರತ ಹಾಗೂ ವಿಶ್ವದ ಹಲವೆಡೆ ಚಿನ್ನದ ಬೆಲೆ ಏರಿಕೆಯಾಗಿದೆ. ಭಾರತದಲ್ಲಿ ಚಿನ್ನದ ಬೆಲೆ ಗ್ರಾಮ್​ಗೆ 15 ರೂನಷ್ಟು ಹೆಚ್ಚಿದೆ.

ಹಲವು ದೇಶಗಳಲ್ಲೂ ಚಿನ್ನ ದುಬಾರಿಯಾಗಿದೆ. ಇನ್ನೊಂದೆಡೆ ಬೆಳ್ಳಿ ಬೆಲೆ ತುಸು ತಗ್ಗಿದೆ. ಗ್ರಾಮ್​ಗೆ 20 ಪೈಸೆಯಷ್ಟು ಕಡಿಮೆ ಆಗಿದೆ.  ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 58,150 ರೂಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 63,440 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,630 ರೂಪಾಯಿ ಇದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 58,150 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,400 ರೂಪಾಯಿ ಇದೆ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಬೆಂಗಳೂರು: 58,150 ರೂ, ಚೆನ್ನೈ: 58,800 ರೂ, ಮುಂಬೈ: 58,150 ರೂ, ದೆಹಲಿ: 58,300 ರೂ, ಕೋಲ್ಕತಾ: 58,150 ರೂ, ಕೇರಳ: 58,150 ರೂ, ಅಹ್ಮದಾಬಾದ್: 58,200 ರೂ, ಜೈಪುರ್: 58,300 ರೂ, ಲಕ್ನೋ: 58,300 ರೂ, ಭುವನೇಶ್ವರ್: 58,150 ರೂ ಇದೆ.

ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ.

ಈ ವರ್ಷದ ಅಂತ್ಯಕ್ಕೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.

 

Ashika S

Recent Posts

ಜಿಲ್ಲಾಧಿಕಾರಿಗಳಿಂದ ವಿಶ್ವಗುರು ಬಸವಣ್ಣನಿಗೆ ಪುಷ್ಪ ನಮನ

ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ 891 ಜಯಂತ್ಯೋತ್ಸವ ಅಂಗವಾಗಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಗಳ…

1 min ago

ಮದುವೆ ಮನೆಯ ಊಟ ಸೇವಿಸಿ ನೂರಾರು ಮಂದಿ ಅಸ್ವಸ್ಥ

ಮದುವೆ ಮನೆಯಲ್ಲಿ ಊಟ ಮಾಡಿದ ನೂರಾರು ಮಂದಿ ಏಕಾಏಕಿ ಅಸ್ವಸ್ಥಗೊಂಡ ಘಟನೆ ಚಿತ್ರದುರ್ಗ ತಾಲೂಕಿನ ಕಾಲ್ಗೆರೆ ಗ್ರಾಮದಲ್ಲಿ ನಡೆದಿದೆ.

12 mins ago

ಕಾಂಗ್ರೆಸ್ ಪರ ಮತ ಹಾಕಿಸಿದ್ದಕ್ಕೆ ಯುವಕನ ಕೊಲೆ

ಚುನಾವಣೆ ಮುಗಿದರೂ ಹಗೆತನ ಮುಗಿಯಲಿಲ್ಲ. ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಕ್ಕೆ ಯುವಕನೊಬ್ಬ ಕೊಲೆಯಾಗಿದ್ದಾನೆ. ಜಾವೀದ್ ಚಿನ್ನಮಳ್ಳಿ (25)ಹತ್ಯೆಯಾದವನು. ಕಲಬುರಗಿಯ ಅಫಜಲಪುರ…

26 mins ago

ಆನ್‌ಲೈನ್ ಟ್ರೇಡಿಂಗ್: 17.35 ಲಕ್ಷ ರೂ. ವಂಚನೆ

ಆನ್‌ಲೈನ್ ಪಾರ್ಟ್‌ಟೈಮ್ ಕೆಲಸ ಹಾಗೂ ಆನ್‌ಲೈನ್ ಟ್ರೇಡಿಂಗ್ ಮೇಸೆಜ್ ನ‌ ಬಲೆಗೆ ಬಿದ್ದ ವ್ಯಕ್ತಿಯೊಬ್ಬರು ಬರೋಬ್ಬರಿ 17.35 ಲಕ್ಷ ರೂ.…

47 mins ago

ಬಿಸಿಲಿನ ತಾಪ, ಮೇವಿನ ಕೊರತೆಯಿಂದ ಸಾವಿಗೀಡಾಗುತ್ತಿವೆ ಸಾಕುಪ್ರಾಣಿಗಳು

ಹೆಚ್ಚುತ್ತಿರುವ ಬಿಸಿಲಿನ ತಾಪ ಹಾಗೂ ಸಮರ್ಪಕ ಮೇವು ದೊರಕದೆ ಕಾಡಂಚಿನ ಗ್ರಾಮಗಳ ಜಾನುವಾರು, ಸಾಕುಪ್ರಾಣಿಗಳು ಸಾವಿಗೀಡಾಗುತ್ತಿವೆ.

1 hour ago

ದೊಡ್ಡಬಳ್ಳಾಪುರ: ಹಳೇ ದ್ವೇಷಕ್ಕೆ ಯುವಕನ ಕತ್ತು ಕುಯ್ದು ಕೊಲೆ

ಹಳೇ ದ್ವೇಷಕ್ಕೆ ನಡುರಸ್ತೆಯಲ್ಲಿ ಯುವಕನ ಕತ್ತು ಕುಯ್ದು ಕೊಲೆ ಮಾಡಿದ ಘಟನೆ ದೊಡ್ಡಬಳ್ಳಾಪುರ ಹೊರವಲಯ ನವೋದಯ ಶಾಲೆಯ ಮುಂಭಾಗದಲ್ಲಿ ನಡೆದಿದೆ.

1 hour ago