Bengaluru 23°C
Ad

ಚಿನ್ನಕ್ಕೆ ಗ್ರಾಮ್​ಗೆ 20 ರೂ ಇಳಿಕೆ: ಇವತ್ತಿನ ದರಪಟ್ಟಿ ಹೀಗಿದೆ

ಹೆಚ್ಚಾಗಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು  ಇಂದು ಕಡಿಮೆಗೊಂಡಿವೆ. ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಚಿನ್ನದ ಬೆಲೆ ಇಳಿಕೆ ಆಗಿದೆ. ಚಿನ್ನದ ಬೆಲೆ ಗ್ರಾಮ್​ಗೆ 20 ರೂ ಇಳಿಕೆ ಆಗಿದೆ. ಬೆಳ್ಳಿ ಬೆಲೆ 2.30 ಪೈಸೆಯಷ್ಟು ಕಡಿಮೆ ಆಗಿದೆ.

ಬೆಂಗಳೂರು: ಹೆಚ್ಚಾಗಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು  ಇಂದು ಕಡಿಮೆಗೊಂಡಿವೆ. ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಚಿನ್ನದ ಬೆಲೆ ಇಳಿಕೆ ಆಗಿದೆ. ಚಿನ್ನದ ಬೆಲೆ ಗ್ರಾಮ್​ಗೆ 20 ರೂ ಇಳಿಕೆ ಆಗಿದೆ. ಬೆಳ್ಳಿ ಬೆಲೆ 2.30 ಪೈಸೆಯಷ್ಟು ಕಡಿಮೆ ಆಗಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 66,600 ರೂಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 72,650 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,180 ರೂಪಾಯಿ ಇದೆ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಬೆಂಗಳೂರು: 66,600 ರೂ, ಚೆನ್ನೈ: 67,250 ರೂ, ಮುಂಬೈ: 66,600 ರೂ, ದೆಹಲಿ: 66,750 ರೂ, ಕೋಲ್ಕತಾ: 66,600 ರೂ, ಕೇರಳ: 66,600 ರೂ, ಅಹ್ಮದಾಬಾದ್: 66,650 ರೂ, ಜೈಪುರ್: 66,750 ರೂ, ಲಕ್ನೋ: 66,750 ರೂ, ಭುವನೇಶ್ವರ್: 66,600 ರೂ ಇದೆ.

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಮಲೇಷ್ಯಾ: 3,460 ರಿಂಗಿಟ್ (61,440 ರೂಪಾಯಿ ), ದುಬೈ: 2,615 ಡಿರಾಮ್ (59,410 ರೂಪಾಯಿ ), ಅಮೆರಿಕ: 710 ಡಾಲರ್ (59,240 ರೂಪಾಯಿ ), ಸಿಂಗಾಪುರ: 983 ಸಿಂಗಾಪುರ್ ಡಾಲರ್ (60,840 ರೂಪಾಯಿ ), ಕತಾರ್: 2,665 ಕತಾರಿ ರಿಯಾಲ್ (60,980 ರೂಪಾಯಿ ), ಸೌದಿ ಅರೇಬಿಯಾ: 2,680 ಸೌದಿ ರಿಯಾಲ್ (59,620 ರೂಪಾಯಿ )
ಓಮನ್: 283 ಒಮಾನಿ ರಿಯಾಲ್ (61,330 ರುಪಾಯಿ), ಕುವೇತ್: 222 ಕುವೇತಿ ದಿನಾರ್ (60,450 ರುಪಾಯಿ) ಆಗಿದೆ.

ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ.

Ad
Ad
Nk Channel Final 21 09 2023
Ad