Bengaluru 24°C
Ad

ಬೆಂಗಳೂರು, ಬಾಗಲಕೋಟೆಯಲ್ಲಿ ತುಪ್ಪ ಸೇಫ್ ಅಲ್ಲ: ಆಹಾರ ಸುರಕ್ಷತಾ ಇಲಾಖೆ ಎಚ್ಚರಿಕೆ!

ತಿರುಪತಿ ಲಡ್ಡು ತಯಾರಿಕೆಗೆ ಬಳಸಲಾದ ತುಪ್ಪ ಕಲಬೆರಕೆ ವಿವಾದ ಬೆಳಕಿಗೆ ಬರುವುದಕ್ಕೂ ಮುನ್ನವೇ ರಾಜ್ಯದಲ್ಲಿ ತುಪ್ಪ ಕಲಬೆರಕೆ ಆಗಿರುವುದು ಬೆಳಕಿಗೆ ಬಂದಿದೆ.

ಬೆಂಗಳೂರು: ತಿರುಪತಿ ಲಡ್ಡು ತಯಾರಿಕೆಗೆ ಬಳಸಲಾದ ತುಪ್ಪ ಕಲಬೆರಕೆ ವಿವಾದ ಬೆಳಕಿಗೆ ಬರುವುದಕ್ಕೂ ಮುನ್ನವೇ ರಾಜ್ಯದಲ್ಲಿ ತುಪ್ಪ ಕಲಬೆರಕೆ ಆಗಿರುವುದು ಬೆಳಕಿಗೆ ಬಂದಿದೆ. ಆಹಾರ ಸುರಕ್ಷತಾ ಇಲಾಖೆ 40 ಕಡೆ ತುಪ್ಪ ಸಂಗ್ರಹ ಮಾಡಿ ಟೆಸ್ಟ್ ಮಾಡಿದಾಗ ರಾಜ್ಯದ 2 ಕಡೆ ತುಪ್ಪ ಕಲಬೆರಕೆ ಆಗಿರುವುದು ಬಯಲಾಗಿದೆ.

ಆಹಾರ ಮತ್ತು ಸುರಕ್ಷತಾ ಇಲಾಖೆ ಆಗಸ್ಟ್ ತಿಂಗಳಲ್ಲಿ ತುಪ್ಪವನ್ನ ಟೆಸ್ಟ್ ಮಾಡಿದೆ. ರಾಜ್ಯಾದ್ಯಂತ 40 ಕಡೆ ಮಾದರಿ ಸಂಗ್ರಹಿಸಿ, ಬೆಂಗಳೂರು ಮತ್ತು ಬಾಗಲಕೋಟೆಯಲ್ಲಿ ತುಪ್ಪ ಸೇಫ್ ಅಲ್ಲ ಎಂದು ವರದಿ ನೀಡಿದೆ.

ಎಲ್ಲಿಯ ತುಪ್ಪ ಸೇಫ್‌ ಅಲ್ಲ ಎಂಬ ವರದಿ ಬಂದಿರುವ ಕಡೆ ತುಪ್ಪ ತಯಾರಿಕಾ ಘಟಕಕ್ಕೆ ಆಹಾರ ಮತ್ತು ಸುರಕ್ಷತಾ ಇಲಾಖೆ ನೋಟಿಸ್ ನೀಡಿದೆ. 30 ದಿನಗಳ ಒಳಗೆ ತುಪ್ಪ ಅಸುರಕ್ಷತೆ ಅಲ್ಲ ಎಂದು ಸಾಬೀತುಪಡಿಸಿಕೊಳ್ಳಲು ಇಲಾಖೆ ಸೂಚಿಸಿದೆ. ಈ ಬಗ್ಗೆ ಮೈಸೂರಿನ ಲ್ಯಾಬ್‍ನಲ್ಲಿ ಖಚಿತತೆಯ ಪರೀಕ್ಷೆ ನಡೆಯುತ್ತಿದೆ. ರಾಜ್ಯದ ನಂದಿನಿ ತುಪ್ಪ ಹೊರತುಪಡಿಸಿ, ಉಳಿದ ತುಪ್ಪಗಳನ್ನು ಟೆಸ್ಟ್ ಮಾಡಲು ಆರೋಗ್ಯ ಸಚಿವರು ಸೂಚಿಸಿದ್ದರು.

Ad
Ad
Nk Channel Final 21 09 2023