ಬೆಂಗಳೂರು: ಕುಂಭಮೇಳವನ್ನ ಕಣ್ತುಂಬಿಕೊಳ್ಳಲು ಕೋಟ್ಯಂತರ ಸಂಖ್ಯೆಯಲ್ಲಿ ಭಕ್ತರು ಪ್ರಯಾಗ್‌ರಾಜ್‌ಗೆ ಭೇಟಿ ಕೊಡುತ್ತಿದ್ದಾರೆ. ಬುಧವಾರ ಪ್ರಯಾಗ್‌ರಾಜ್‌ಗೆ ಹೋಗಲು ವಿಮಾನದ ಟಿಕೆಟ್ ಬುಕ್ ಮಾಡಲು ಹೊರಟವರಿಗೆ ಶಾಕ್ ಆಗಿದೆ.
ಬೆಂಗಳೂರಿನಿಂದ ಪ್ರಯಾಗ್‌ರಾಜ್‌ಗಿರುವ ಫ್ಲೈಟ್ ಟಿಕೆಟ್ ದರ 30 ರಿಂದ 39,000 ವರೆಗೆ ಏರಿಕೆಯಾಗಿದ್ದು, ಬೆಂಗಳೂರಿನಿಂದ ಪ್ರಯಾಗ್‌ರಾಜ್‌ಗೆ ಹೋಗುವ ಅಷ್ಟು ವಿಮಾನಗಳ ಟಿಕೆಟ್ ಸೋಲ್ಡ್ ಔಟ್ ಆಗಿದೆ.
ಬೆಂಗಳೂರು ಟು ಪ್ರಯಾಗ್ ರಾಜ್ ಸಾಮಾನ್ಯ ದಿನಗಳ ದರ 4 ರಿಂದ 8 ಸಾವಿರ ರೂ. ಇಂದಿನ ದರ- 30 ರಿಂದ 45 ಸಾವಿರ ರೂ. ಫೆಬ್ರವರಿ 26ರ ವರಗೆ ಕನಿಷ್ಠ ದರ 24 ಸಾವಿರ ರೂ. ದೆಹಲಿಯಿಂದ ಪ್ರಯಾಗ್‌ರಾಜ್‌ಗೆ ಸಾಮಾನ್ಯ ದಿನಗಳ ದರ – 3 ರಿಂದ 6 ಸಾವಿರ ರೂ. ಇಂದಿನ ದರ-20 ರಿಂದ 30 ಸಾವಿರ ರೂ. ಫೆಬ್ರವರಿ 26ರ ವರೆಗೆ 18 ರಿಂದ 24 ಸಾವಿರದ ವರೆಗೆ ರೂ ಆಗಿದೆ.