ಬೆಂಗಳೂರು: ಉದ್ಯೋಗ ಅರಸಿ ಉತ್ತರ ಭಾರತದಿಂದ ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಳ್ಳುವವರ ಸಂಖ್ಯೆ ಸಾಕಷ್ಟಿದೆ. ಅಂತವರಲ್ಲಿ ಕೆಲವರು ಬೆಂಗಳೂರಿನ ಬಗ್ಗೆಯೇ ನಾಲಿಗೆ ಹರಿಬಿಸುತ್ತಾರೆ. ಅಂತಹದ್ದೇ ಪ್ರಕರಣವೊಂದು ಇಂದು ನಡೆದಿದೆ. ಉತ್ತರ ಭಾರತದವರು ಇಲ್ಲದಿದ್ರೆ ಬೆಂಗಳೂರು ಖಾಲಿಯಾಗುತ್ತೆ ಎಂದು ಹೇಳಿರುವ ಮಹಿಳೆಯೊಬ್ಬಳ ವಿಡಿಯೋ ವೈರಲ್ ಆಗಿದ್ದು, ಮಹಿಳೆ ಮಾತು ಕೇಳಿ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಕನ್ನಡಿಗರು ತೊಲಗ್ರೋ ಬೇಗ ಹ್ಯಾಶ್ ಟ್ಯಾಗ್ ಅಭಿಯಾನ ಆರಂಭಿಸಿದ್ದಾರೆ. ಅಭಿಯಾನಕ್ಕೆ ಹೆದರಿರುವ ಮಹಿಳೆ ಕ್ಷಮೆ ಕೇಳಿದ್ದಾಳೆ.
ಈ ಬಗ್ಗೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ, ‘ಕರ್ನಾಟಕ ಖಾಲಿ ಆಗೋದಿಲ್ಲ, ಬದಲಾಗಿ ಕ್ಲೀನ್ ಆಗುತ್ತದೆ. ಇರೋದಾದ್ರೆ ಸುಮ್ನೀರಿ, ಇಲ್ಲದಿದ್ರೆ ಮೂಟೆ ಕಟ್ಕೋಂಡು ಹೊರಡಿ ಎಂದು ಉತ್ತರ ಭಾರತ ಮೂಲದ ಮಹಿಳೆಗೆ ಟಿ.ಎ.ನಾರಾಯಣಗೌಡ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
Ad