ಬೆಂಗಳೂರು : ಸೀರಿಯಲ್ ನಟಿಯ ಮದುವೆಯ ಪ್ರಸ್ತಾಪಕ್ಕೆ ಬೆದರಿದ ಯುವಕನೊಬ್ಬ ಬೆಂಗಳೂರಿನಲ್ಲಿ ಇಂದು ಸೊಸೈಡ್ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿ ದಂತೆ ಇದೀಗ ಕನ್ನಡತಿ ಸೀರಿಯಲ್ ಕಿರುತೆರೆ ನಟಿ ವೀಣಾ ಆಮೇಲೆ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಹೌದು ಹುಳಿಮಾವು ಠಾಣೆಯಲ್ಲಿ ಕಿರುತೆರೆ ನಟಿ ವೀಣಾ ವಿರುದ್ಧ FIR ದಾಖಲಾಗಿದೆ. ಕಿರುತೆರೆ ನಟಿ ವೀಣಾ, ಮದನ್ ಸ್ನೇಹಿತನನ್ನು ಪ್ರೀತಿ ಮಾಡುತ್ತಿದ್ದಳು. ಆದರೂ ಮದನ್ ಪ್ರೀತಿಸುವಂತೆ ವೀಣಾ ಒತ್ತಾಯಿಸುತ್ತಿದ್ದಳು. ವೀಣಾ ಎಷ್ಟೇ ಒತ್ತಾಯಿಸಿದ್ದರು ಮದನ್ ಇಷ್ಟವಿಲ್ಲ ಎಂದು ಹೇಳಿದ್ದ. ಬಳಿಕ ಆಗಾಗ ನಮ್ಮ ಮನೆ ಹತ್ತಿರ ಕಿರುತೆರೆ ನಟಿ ವೀಣಾ ಬರುತ್ತಿದ್ದಳು. ಮಾನ ಹರಾಜು ಹಾಕ್ತಿನಿ ಎಂದು ವೀಣಾ ಬೆದರಿಕೆ ಹಾಕುತ್ತಿದ್ದಳು ಎಂದು ಮದನ್ ತಾಯಿ ತಿಳಿಸಿದ್ದಾರೆ.ಈ ಹಿಂದೆ ಬ್ಲೇಡ್ನಿಂದ ಕೈ ಕೊಯ್ದುಕೊಂಡಿದ್ದಳು. ಆಗಾಗ ಕರೆ ಮಾಡಿ ಹೇಳಿದ ಜಾಗಕ್ಕೆ ಬರಲು ಒತ್ತಾಯ ಮಾಡುತ್ತಿದ್ದಳು.
ಘಟನೆ ಹಿನ್ನೆಲೆ?
ಸಿರಿಯಲ್ ನಟಿಯ ಪ್ರೇಮ ಪಾಶಕ್ಕೆ ಯುವಕ ಜೀವ ತೊರೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೃತ ಯುವಕನನ್ನು ಮದನ್ (25) ಎಂದು ಗುರುತಿಸಲಾಗಿದೆ. ಸಿರಿಯಲ್ ನಟಿ ವೀಣಾ ಮೋಹಕ್ಕೆ ಬಿದ್ದಿದ್ದ ಮದನ್ ಆಕೆಯನ್ನು ಪ್ರೀತಿ ಮಾಡುತ್ತಾ ಕೆಲವು ದಿನಗಳಿಂದ ಇಬ್ಬರೂ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದರು.