Bengaluru 16°C

ಆ 8ರಿಂದ ಲಾಲ್ ಬಾಗ್​ನಲ್ಲಿ ಫವರ್ ಶೋ: ಈ 9 ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧ

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ತೋಟಗಾರಿಕೆ ಇಲಾಖೆಯಿಂದ ಆ.8ರಿಂದ 19ರವರೆಗೆ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ. ನಾಳೆಯಿಂದ 12 ದಿನಗಳವರೆಗೆ ಪ್ಲವರ್ ಶೋ ನಡೆಯಲಿದ್ದು, ಲಕ್ಷಾಂತರ ಜನರು ಭೇಟಿ ನಿರೀಕ್ಷಿಸಲಾಗಿದೆ. ಹೀಗಾಗಿ ಪ್ಲವರ್ ಶೋಗೆ ಬರುವ ಜನರಿಗೆ ವಾಹನ ನಿಲುಗಡೆ 4 ಕಡೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಪ್ರಮುಖ 9 ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧ ಮಾಡಿ ಸಂಚಾರಿ ಪೊಲೀಸರಿಂದ ಆದೇಶ ಹೊರಡಿಸಲಾಗಿದೆ.

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ತೋಟಗಾರಿಕೆ ಇಲಾಖೆಯಿಂದ ಆ.8ರಿಂದ 19ರವರೆಗೆ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ. ನಾಳೆಯಿಂದ 12 ದಿನಗಳವರೆಗೆ ಪ್ಲವರ್ ಶೋ ನಡೆಯಲಿದ್ದು, ಲಕ್ಷಾಂತರ ಜನರು ಭೇಟಿ ನಿರೀಕ್ಷಿಸಲಾಗಿದೆ. ಹೀಗಾಗಿ ಪ್ಲವರ್ ಶೋಗೆ ಬರುವ ಜನರಿಗೆ ವಾಹನ ನಿಲುಗಡೆ 4 ಕಡೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಪ್ರಮುಖ 9 ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧ ಮಾಡಿ ಸಂಚಾರಿ ಪೊಲೀಸರಿಂದ ಆದೇಶ ಹೊರಡಿಸಲಾಗಿದೆ.


ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಕ್ರಮಕೈಗೊಳ್ಳಲಾಗಿದ್ದು, ಸಾರ್ವಜನಿಕರು ಸಾಧ್ಯವಾದಷ್ಟು ಮಟ್ಟಿಗೆ ಬಿಎಂಟಿಸಿ ಬಸ್, ಮೆಟ್ರೋ, ಕ್ಯಾಬ್‌ಗಳನ್ನು ಬಳಸಲು ಮನವಿ ಮಾಡಿದ್ದಾರೆ.


ವಾಹನಗಳ ನಿಲುಗಡೆಗೆ ಅವಕಾಶ

  • ಮರಿಗೌಡ ರಸ್ತೆಯ ಆಲ್ ಅಮೀನ್ ಕಾಲೇಜ್ ಆವರಣದಲ್ಲಿ ಬೈಕ್ ಪಾರ್ಕಿಂಗ್​​
  • ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣದ ಮೇಲೆ ನಾಲ್ಕು ಚಕ್ರದ ವಾಹನ ನಿಲುಗಡೆ ವ್ಯವಸ್ಥೆ
  • ಮರಿಗೌಡ ರಸ್ತೆಯ ಹಾಪ್ ಕಾಮ್ಸ್​​ನಲ್ಲಿ ಬೈಕ್ ಹಾಗೂ ಕಾರು ನಿಲುಗಡೆ
  • ಜೆ.ಸಿ. ರಸ್ತೆ ಕಾರ್ಪೋರೇಷನ್ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ಹಾಗೂ ಕಾರು ನಿಲುಗಡೆ ವ್ಯವಸ್ಥೆ ಮಾಡಲಾಗಿದೆ.

ಪಾರ್ಕಿಂಗ್ ನಿಷೇಧ

  • ಡಾ. ಮರಿಗೌಡ ರಸ್ತೆ, ಲಾಲ್‌ಬಾಗ್ ಮುಖ್ಯದ್ವಾರದಿಂದ ನಿಮ್ಹಾನ್ಸ್​ವರೆಗೆ ರಸ್ತೆಯ ಎರಡು ಬದಿ
  • ಕೆ.ಹೆಚ್.ರಸ್ತೆ, ಕೆ.ಹೆಚ್.ವೃತ್ತದಿಂದ ಶಾಂತಿನಗರ ಜಂಕ್ಷನ್​ವರೆಗೆ ರಸ್ತೆಯ ಎರಡು ಬದಿ
  • ಲಾಲ್‌ಬಾಗ್ ರಸ್ತೆ, ಸುಬ್ಬಯ್ಯ ವೃತ್ತದಿಂದ ಲಾಲ್‌ಭಾಗ್ ಮುಖ್ಯದ್ವಾರದ ವರೆಗೆ
  • ಸಿದ್ದಯ್ಯ ರಸ್ತೆ, ಊರ್ವಶಿ ಥಿಯೇಟರ್ ಜಂಕ್ಷನ್​ನಿಂದ ವಿಲ್ಸನ್ ಗಾರ್ಡನ್ 12ನೇ ಕ್ರಾಸ್​ವರೆಗೆ
  • ಬಿಟಿಎಸ್ ಬಸ್ ನಿಲ್ದಾಣ, ಬಿಎಂಟಿಸಿ ಜಂಕ್ಷನ್​ನಿಂದ ರಸ್ತೆಯ ಎರಡು ಬದಿಗಳಲ್ಲಿ
  • ಕೃಂಬಿಗಲ್ ರಸ್ತೆಯ ಎರಡು ಕಡೆಗಳಲ್ಲಿ
  • ಲಾಲ್‌ಬಾಗ್ ವೆಸ್ಟ್ಗೇಟ್‌ನಿಂದ ಆರ್.ವಿ. ಟೀರ್ಸ್​ ಕಾಲೇಜ್‌ವರೆಗೆ
  • ಆರ್‌ವಿ ಟೀರ್ಸ್​ ಕಾಲೇಜ್‌ನಿಂದ ಅಶೋಕ ಪಿಲ್ಲರ್​ವರೆಗೆ
  • ಅಶೋಕ ಪಿಲ್ಲರ್‌ನಿಂದ ಸಿದ್ದಾಪುರ ಜಂಕ್ಷನ್ ವರೆಗೆ
Nk Channel Final 21 09 2023