ಒಂದು ಸುತ್ತಿನ ಮಾತುಕತೆ ಪೂರ್ಣಗೊಳಿಸಿ, ಕೈ ಸೇರ್ಪಡೆಗೆ ಸಜ್ಜಾದ ಸವದಿ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಬಿಜೆಪಿ ಸಭೆ ನಡೆಸುತ್ತಿದ್ದು, ಇಂದು ಅಥವಾ ನಾಳೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ನಡುವೆಯೇ ಬಿಜೆಪಿ ಹಿರಿಯ ಮುಖಂಡ ಲಕ್ಷ್ಮಣ ಸವದಿ ಟಿಕೇಟ್‌ ವಿಷಯದಲ್ಲಿ ಮುನಿಸಿಕೊಂಡಿದ್ದು ಕಾಂಗ್ರೆಸ್‌ ಸೇರ್ಪಡೆಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಅಥಣಿ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಗಾಗಿ ಪೈಪೋಟಿ ಆರಂಭವಾಗಿದ್ದು, ಟಿಕೆಟ್ ಗಾಗಿ ಬಿಜೆಪಿ ಹಿರಿಯ ಮುಖಂಡ ಲಕ್ಷ್ಮಣ ಸವದಿ ಹಾಗೂ ಮಹೇಶ ಕುಮಟಳ್ಳಿ ನಡುವೆ ಬಿಗ್ ಫೈಟ್ ನಡೆಯುತ್ತಿದೆ. ಮಹೇಶ್ ಕುಮಟಳ್ಳಿ ಪರ ರಮೇಶ್ ಜಾರಕಿಹೊಳಿ ಬ್ಯಾಟ್ ಬೀಸುತ್ತಿದ್ದಾರೆ. ಹೀಗಾಗಿ ಟಿಕೆಟ್ ಕೈ ತಪ್ಪಿದರೆ ಲಕ್ಷ್ಮಣ ಸವದಿ ಅವರನ್ನು ಕಾಂಗ್ರೆಸ್ ಗೆ ಸೆಳೆಯುವ ಯತ್ನ ನಡೆದಿದೆ ಎನ್ನಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಮುಸುಕಿನ ಗುದ್ದಾಟದಂತಿದ್ದ ಈ ಫೈಟ್‌ ಪ್ರಸ್ತುತ ಮಾತು ಪ್ರತಿ ಮಾತಿಗೆ ಕಾರಣವಾಗಿದೆ. ಅಲ್ಲದೇ ಮಾಜಿ ಸಚಿವ ರಮೇಶ ಜಾರಕಿಹೊಳಿ ಕೈ ಮೇಲಾಗುವ ಸಾಧ್ಯತೆ ಅಧಿಕವಾಗಿದೆ. ಈ ನಿಟ್ಟಿನಲ್ಲಿ ತಮಗೆ ಟಿಕೇಟ್‌ ಸಿಗುವುದಿಲ್ಲ ಎಂದು ಖಾತ್ರಿಯಾದ ಬಳಿಕ ಸವದಿ ಕಾಂಗ್ರೆಸ್‌ ಕದತಟ್ಟುವ ಯತ್ನದಲ್ಲಿದ್ದಾರೆ.

ಮಾತುಕತೆ: ಕಾಂಗ್ರೆಸ್ ನ ಹಿರಿಯ ನಾಯಕರು ಲಕ್ಷ್ಮಣ ಸವದಿ ಅವರ ಸಂಪರ್ಕದಲ್ಲಿದ್ದು, ಕೊಪ್ಪಳ ಮೂಲದ ಶಾಸಕರ ಜತೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದೆ ಎನ್ನಲಾಗಿದೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಕಾಯುತ್ತಿರುವ ಲಕ್ಷ್ಮಣ ಸವದಿ ಟಿಕೆಟ್ ಸಿಕ್ಕದಿದ್ದಲ್ಲಿ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.

Umesha HS

Recent Posts

ಜಿಂದಾಲ್‌ನ ಎಚ್ಎಸ್ಎಂ ಪ್ಲಾಂಟ್‌ನಲ್ಲಿ ನೀರಿನ ಟ್ಯಾಂಕ್‌ಗೆ ಬಿದ್ದು 3 ಎಂಜಿನಿಯರ್‌ಗಳು ಮೃತ್ಯು

ನೀರಿನ ಟ್ಯಾಂಕ್‌ನಲ್ಲಿ ಬಿದ್ದು ಮೂವರು ಎಂಜಿನಿಯರ್‌ಗಳು ಸಾವಿಗೀಡಾದ ಘಟನೆ ಬಳ್ಳಾರಿ ಜಿಲ್ಲೆಯ ಜಿಂದಾಲ್‌ನ ಎಚ್ಎಸ್ಎಂ ಪ್ಲಾಂಟ್‌ನಲ್ಲಿ ನಡೆದಿದೆ.

6 mins ago

ವಿದ್ಯುತ್ ಹೈಟೆನ್ಷನ್ ವೈರ್ ತಾಗಿ ವ್ಯಕ್ತಿ ಮೃತ್ಯು

ವಿದ್ಯುತ್ ಹೈಟೆನ್ಷನ್ ವೈರ್ ತಾಕಿ ವ್ಯಕ್ತಿ ಸಾವನ್ನಪ್ಪಿದ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಚಿಕ್ಕೆನಕೊಪ್ಪ ಗ್ರಾಮದಲ್ಲಿ ನಡೆದಿದೆ.

19 mins ago

ಅದೃಷ್ಟ ನಮ್ಮ ಕೈ ಹಿಡಿಯಬೇಕಿದೆ: ಆರ್​ಸಿಬಿ ನಾಯಕ ಫಾಫ್​ ಡು ಪ್ಲೆಸಿಸ್​

ಕ್ರಿಕೆಟ್​ ಅಸೋಸಿಯೇಷನ್​ ಮೈದಾನದಲ್ಲಿ ನಡೆದ 17ನೇ ಆವೃತ್ತಿಯ 58ನೇ ಐಪಿಎಲ್​ ಪಂದ್ಯದಲ್ಲಿ ಅಲ್ರೌಂಡ್​ ಪ್ರದರ್ಶನದ ಫಲವಾಗಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು…

34 mins ago

“ಜೈಶ್ರೀರಾಮ್” ಹಾಡಿನಿಂದ ಕಾಲೇಜಿನಲ್ಲಿ ಧರ್ಮದಂಗಲ್: ಸಂಸದ ಪ್ರತಾಪ್​ ಸಿಂಹ ಖಂಡನೆ

ಧರ್ಮ ದಂಗಲ್​ ಕಿಡಿ ಮೈಸೂರಿನಲ್ಲಿ ಹೊತ್ತಿಕೊಂಡಿದ್ದು, ಮೈಸೂರಿನ ಸಂತ ಫಿಲೋಮಿನಾಸ್ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಹಾಡಿದ ಜಯತು ಜಯತು ಜೈ…

55 mins ago

ಭಾರತದಲ್ಲಿ ಹಿಂದುಗಳ ಸಂಖ್ಯೆ ಇಳಿಕೆ, ಮುಸ್ಲಿಮರ ಸಂಖ್ಯೆ ಏರಿಕೆ: ಆರ್ಥಿಕ ಸಲಹಾ ಮಂಡಳಿ

ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳ ಜನಸಂಖ್ಯೆ ಕುಸಿತವಾಗುತ್ತಿದ್ದು ಇದೇ ವೇಳೆ ಮುಸ್ಲಿಮರ ಸಂಖ್ಯೆ ಹೆಚ್ಚುತ್ತಿದೆ ಎಂದು ಪ್ರಧಾನ ಮಂತ್ರಿ ಆರ್ಥಿಕ ಸಲಹಾ…

1 hour ago

ಪಟಾಕಿ ತಯಾರಿಕಾ ಕಾರ್ಖಾನೆ ಸ್ಫೋಟ: 8 ಮಂದಿ ಮೃತ್ಯು

ಕಾರ್ಖಾನೆಯೊಂದರಲ್ಲಿ ಪಟಾಕಿ ಸಿಡಿದು 8 ಜನರು ಸಾವನ್ನಪ್ಪಿದ ಘಟನೆ ತಮಿಳುನಾಡಿನ ಶಿವಕಾಶಿಯಲ್ಲಿ ನಡೆದಿದೆ.

1 hour ago