Ad

ಜಾಗಟೆ ಬಾರಿಸುತ್ತ ದರ್ಶನ್‌ ಭೇಟಿಗೆ ಬಂದ ವಿಶೇಷ ಚೇತನ ಅಭಿಮಾನಿ!

ರೇಣುಕಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಪಾಲಾಗಿರುವ ದರ್ಶನ್‌ ಅವರನ್ನು ದಿನಕೊಬ್ಬರು ಬಂದು ನೋಡಿ ಹೋಗುತ್ತಿದ್ದಾರೆ. ಅಭಿಮಾನಿಗಳು, ಸ್ನೇಹಿತರು ಸಂಬಂಧಿಕರು ಬಂದು ವಿಚಾರಿಸಿ ಹೋಗುತ್ತಿದ್ದಾರೆ

ಬೆಂಗಳೂರು: ರೇಣುಕಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಪಾಲಾಗಿರುವ ದರ್ಶನ್‌ ಅವರನ್ನು ದಿನಕೊಬ್ಬರು ಬಂದು ನೋಡಿ ಹೋಗುತ್ತಿದ್ದಾರೆ. ಅಭಿಮಾನಿಗಳು, ಸ್ನೇಹಿತರು ಸಂಬಂಧಿಕರು ಬಂದು ವಿಚಾರಿಸಿ ಹೋಗುತ್ತಿದ್ದಾರೆ.ಆದರೆ ಪೊಲೀಸರು ಯಾರಿಗೂ ಅವಕಾಶ ನೀಡುತ್ತಿಲ್ಲ. ಕೇವಲ ಕುಟುಂಬ ಸದಸ್ಯರಿಗೆ ಹಾಗೂ ವಕೀಲರಿಗಷ್ಟೆ ಅವಕಾಶ ನೀಡಲಾಗಿದೆ. ಇದೀಗ ದಾಸಪ್ಪ ವೃತ್ತಿ ಮಾಡುವ ವಿಶೇಷ ಚೇತನ ಅಭಿಮಾನಿ, ಹಾಗೂ ಮಾರತ್ತಹಳ್ಳಿಯಿಂದ ಆಟೋ ಚಾಲಕ ಸುನೀಲ್ ದರ್ಶನ್‌ ನೋಡಲು ಬಂದಿದ್ದಾರೆ.

Ad
300x250 2

ಇಂದು ಭಾನುವಾರ ಆದ ಕಾರಣ ದರ್ಶನ್‌ ಭೇಟಿಗೆ ಯಾರಿಗೂ ಅವಕಾಶ ಇಲ್ಲ. ಆದರೂ ನಟ ದರ್ಶನ್ ಭೇಟಿಗೆ ವಿಶೇಷ ಚೇತನ ಆಗಮಿಸಿದ್ದರು, ದಾಸಪ್ಪ ವೃತ್ತಿ ಮಾಡುವ ವಿಶೇಷ ಚೇತನ ಅಭಿಮಾನಿ, ಕಿವಿ ಕೇಳಿಸದಿದ್ದರು ಶಂಖ ಊದುತ್ತಾ, ಜಾಗಟೆ ಬಾರಿಸುತ್ತ ಜೈಲಿನ ಬಳಿ ಬಂದಿದ್ದರು.

ನಟ ದರ್ಶನ್ ಸಾಕಷ್ಟು ಸಮಾಜಸೇವೆ ಮಾಡಿದ್ದಾರೆ ಮಾನವೀಯತೆ ದೃಷ್ಟಿಯಿಂದ ಬಿಡುಗಡೆ ಮಾಡಬೇಕು. ದರ್ಶನ್ ಬಿಡುಗಡೆಗಾಗಿ ಗೃಹ ಮಂತ್ರಿ ಜಿ ಪರಮೇಶ್ವರ ಭೇಟಿಗೆ ಹೋಗಿದ್ದೆ. ಆದರೆ ಅವರು ಸಿಗಲಿಲ್ಲʼʼ ಎಂದು ವಿಶೇಷ ಚೇತನ ಅಭಿಮಾನಿ ಗೋವಿಂದ ರಾಜು ಹೇಳಿಕೆ ನೀಡಿದರು.

Ad
Ad
Nk Channel Final 21 09 2023
Ad