Bengaluru 24°C
Ad

ಹೆಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಜೂನ್ 12 ರ ವರೆಗೆ ಗಡುವು ವಿಸ್ತರಣೆ

ಇಂದು ಮಧ್ಯರಾತ್ರಿ 12 ರವರೆಗೆ ಗಡುವು ನೀಡಲಾಗಿತ್ತು, ಆದರೆ ಹಲವು ಬಾರಿ ಗಡುವು ವಿಸ್ತರಣೆ ಮಾಡಿದರೂ ಸಹ ನಂಬರ್ ಪ್ಲೇಟ್ ಅಳವಡಿಕೆ ಕಡಿಮೆ ಪ್ರಮಾಣದಲ್ಲಿ ಆಗಿರುವುದರಿಂದ ಹೈಕೋರ್ಟ್ ಜೂನ್ 12 ರ ವರೆಗೆ  ವಿಸ್ತರಿಸಿದೆ.

ಬೆಂಗಳೂರು:  ಹೆಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳಲು ಹೈಕೋರ್ಟ್ ಜೂನ್ 12 ರ ವರೆಗೆ ಗಡುವು  ವಿಸ್ತರಿಸಿದೆ.

ಇಂದು ಮಧ್ಯರಾತ್ರಿ 12 ರವರೆಗೆ ಗಡುವು ನೀಡಲಾಗಿತ್ತು, ಆದರೆ ಹಲವು ಬಾರಿ ಗಡುವು ವಿಸ್ತರಣೆ ಮಾಡಿದರೂ ಸಹ ನಂಬರ್ ಪ್ಲೇಟ್ ಅಳವಡಿಕೆ ಕಡಿಮೆ ಪ್ರಮಾಣದಲ್ಲಿ ಆಗಿರುವುದರಿಂದ ಹೈಕೋರ್ಟ್ ಜೂನ್ 12 ರ ವರೆಗೆ  ವಿಸ್ತರಿಸಿದೆ.

ಹೈಕೋರ್ಟ್ ಕೊಟ್ಟ ಗಡುವು ಮುಗಿದ ನಂತರವೂ ಅಳವಡಿಸಿಕೊಂಡಿಲ್ಲ ಎಂದರೆ ಮೊದಲ ಬಾರಿ 500 ರುಪಾಯಿ ಎರಡನೇ ಬಾರಿ 1 ಸಾವಿರ ಮೂರನೇ ಬಾರಿ ಗಾಡಿ ಸೀಜ್ ಮಾಡ್ತಿವಿ ಎಂದು ರಾಜ್ಯ ಸಾರಿಗೆ ಇಲಾಖೆ ಅಡಿಷನಲ್ ಕಮೀಷನರ್ ಮಲ್ಲಿಕಾರ್ಜುನ್ ಎಚ್ಚರಿಕೆ ನೀಡಿದ್ದಾರೆ.

ಇನ್ನೂ ಈಗಾಗಲೇ ಹೆಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಲು ಕೊನೆಯ ದಿನಾಂಕ ಹತ್ತಿರವಾಗ್ತಿದಂತೆ ವಾಹನ ಮಾಲೀಕರು ಮುಗಿಬಿದ್ದು ಆನ್ಲೈನ್ ಮೂಲಕ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಬುಕ್ಕಿಂಗ್ ಮಾಡಲು ಮುಂದಾಗಿದ್ದಾರೆ.  ಇದರಿಂದ ಸಾಕಷ್ಟು ನಕಲಿ‌ ಕಂಪನಿಗಳು ಹುಟ್ಟಿಕೊಂಡಿದ್ದು ಅಸಲಿ ನಕಲಿ ಗೊತ್ತಾಗದೆ ವಾಹನ ಮಾಲೀಕರು ನಕಲಿ ಕಂಪನಿಗಳಲ್ಲಿ ಹಣ ಹಾಕಿ ಹಣ ಕಳೆದುಕೊಳ್ಳುತ್ತಿದ್ದಾರೆ.

Ad
Ad
Nk Channel Final 21 09 2023
Ad