ಬೆಂಗಳೂರು: ರೆಸ್ಟೋರೆಂಟ್ ಒಂದರ ಮಹಿಳಾ ಶೌಚಾಲಯದ ಕಸದ ಬುಟ್ಟಿಯಲ್ಲಿ ಮೊಬೈಲ್ ಪೋನ್ ಇಟ್ಟು ಅಸಭ್ಯ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದ ವಿಕೃತ ಮನಸ್ಸಿನ ಹೊಟೇಲ್ ಕೆಲಸಗಾರನೊಬ್ಬನನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾ| ಮನೋಜ್ (23) ಬಂಧಿತ ಆರೋಪಿ. ಈತ ಸದಾಶಿವನಗರ ಠಾಣಾ ವ್ಯಾಪ್ತಿಯ 80 ಅಡಿ ರಸ್ತೆಯಲ್ಲಿರುವ ರೆಸ್ಟೋರೆಂಟ್‌ವೊಂದರಲ್ಲಿ ಕಾಫಿ ಮಾಡುವ ಕೆಲಸ ಮಾಡಿಕೊಂಡಿದ್ದ.
ಇದರ ಜೊತೆಗೆ ಈತನಿಗೆ ಮಹಿಳೆಯರ ಅಸಭ್ಯ ದೃಶ್ಯಗಳನ್ನು ರಹಸ್ಯವಾಗಿ ಸೆರೆ ಹಿಡಿಯುವ ಚಟ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈತ ರೆಸ್ಟೋರೆಂಟ್ನಲ್ಲಿರುವ ಮಹಿಳಾ ಶೌಚಾಲಯದ ಕಸದ ಬುಟ್ಟಿಯಲ್ಲಿ ಮೊಬೈಲ್ ಇಟ್ಟು ಮಹಿಳೆಯರ ಅಸಭ್ಯ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದ ಎನ್ನಲಾಗಿದೆ. ಆದರೆ, ಗ್ರಹಚಾರ ಕೈ ಕೊಟ್ಟಿದ್ದರಿಂದ ಇದೀಗ ಆತ ಜೈಲು ಪಾಲಾಗು ವಂತಾಗಿದೆ.
Read More:
ಬೆಂಗಳೂರಿನ ಪ್ರತಿಷ್ಠಿತ ಕಾಫಿ ಶಾಪ್‌ನ ಮಹಿಳಾ ವಾಶ್‌ರೂಮ್‌ನಲ್ಲಿ ಕಳ್ಳ ಕ್ಯಾಮರಾ !
Ad