Ad

ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿಯ ಆಗಮನ

Rita

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಆನೆ ಮರಿ  ಜನನವಾಗಿದ್ದು ಇಡೀ ಉದ್ಯಾನವನದಲ್ಲಿ ಸಂತಸ ಮನೆ ಮಾಡಿದೆ.

Ad
300x250 2

ಸಫಾರಿಯ ಸೀಗೆಕಟ್ಟೆಯಲ್ಲಿ ಮರಿಯಾನೆ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. 9 ವರ್ಷದ ರೀಟಾ ಎಂಬ ಹೆಣ್ಣಾನೆ ಗಂಡು ಮರಿಯಾನೆಗೆ ಜನ್ಮ ನೀಡಿದೆ.

ಇದೇ ಮೊದಲ ಬಾರಿಗೆ ಮರಿಯೊಂದಕ್ಕೆ ರೀಟಾ ಜನ್ಮ ನೀಡಿದೆ. ಪಶು ವೈದ್ಯರು ಮತ್ತು ಸಿಬ್ಬಂದಿ ಆರೈಕೆಯಲ್ಲಿ ತಾಯಿ ಹಾಗೂ ಮರಿಯಾನೆ ಆರೋಗ್ಯವಾಗಿದೆ. ಮರಿಯಾನೆ ಜನನದಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಆನೆಗಳ ಸಂಖ್ಯೆ 27ಕ್ಕೆ ಏರಿಕೆಯಾಗಿದೆ. 27 ಆನೆಗಳ ಪೈಕಿ 12 ಗಂಡು ಮತ್ತು 15 ಹೆಣ್ಣಾನೆಗಳಿವೆ.

Ad
Ad
Nk Channel Final 21 09 2023
Ad