Bengaluru 30°C

ಮಾರಕ ಜೀಕಾ ವೈರಸ್​ಗೆ ಕರ್ನಾಟಕದಲ್ಲಿ ಮೊದಲ ಬಲಿ : ಶಿವಮೊಗ್ಗದ ವೃದ್ಧ ಸಾವು

ಅಪಾಯಕಾರಿ ಜೀಕಾ ವೈರಸ್​ಗೆ ಕರ್ನಾಟದಲ್ಲಿ ಮೊದಲ ಬಲಿಯಾಗಿದೆ. ಜೀಕಾ ವೈರಸ್​ ಸೋಂಕಿನಿಂದ ಬಳಸುತ್ತಿದ್ದ ವ್ಯಕ್ತಿಯೊಬ್ಬರು ಸೋಮವಾರ ಮೃತಪಟ್ಟಿದ್ದಾರೆ. 73 ವರ್ಷದ ವ್ಯಕ್ತಿ

ಬೆಂಗಳೂರು : ಅಪಾಯಕಾರಿ ಜೀಕಾ ವೈರಸ್​ಗೆ ಕರ್ನಾಟದಲ್ಲಿ ಮೊದಲ ಬಲಿಯಾಗಿದೆ. ಜೀಕಾ ವೈರಸ್​ ಸೋಂಕಿನಿಂದ ಬಳಸುತ್ತಿದ್ದ ವ್ಯಕ್ತಿಯೊಬ್ಬರು ಸೋಮವಾರ ಮೃತಪಟ್ಟಿದ್ದಾರೆ. 73 ವರ್ಷದ ವ್ಯಕ್ತಿ ಮೃತಪಟ್ಟವರು ಎಂದು ಮೂಲಗಳು ತಿಳಿಸಿವೆ. ಅವರಿಗೆ ಕೆಲವು ದಿನಗಳಿಂದ ಜೀಕಾ ವೈರಸ್​ನಿಂದ ಆಗುವ ಸೋಂಕು ಇತ್ತು. ಜತೆಗೆ ಅವರಿಗೆ ಕೋಮಾರ್ಬಿಟಿಸ್ ಕೂಡ ಇತ್ತು. ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.


ರಾಜ್ಯದಲ್ಲಿ ಇದುವರೆಗೂ ಒಟ್ಟು 9 ಜೀಕಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಶಿವಮೊಗ್ಗದಲ್ಲಿ 3, ಬೆಂಗಳೂರಿನ ಜಿಗಣಿ ಪ್ರದೇಶದಲ್ಲಿ 6 ಜನರಿಗೆ ಜೀಕಾ ವೈರಸ್​ ಸೋಂಕು ಕಂಡು ಬಂದಿದೆ. ಬೆಂಗಳೂರಿನಲ್ಲಿ ಜೀಕಾ ವೈರಸ್​ ಪತ್ತೆಯಾದವರಲ್ಲಿ ಒಬ್ಬರು ಗರ್ಭಿಣೀ ಎಂದು ಆರೋಗ್ಯ ಇಲಾಖೆಯಿಂದ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ.


Nk Channel Final 21 09 2023