News Karnataka Kannada
Friday, April 19 2024
Cricket
ಬೆಂಗಳೂರು

ಡಾ.ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಗೆ ಚಾಲನೆ

K
Photo Credit : News Kannada

ಬೆಂಗಳೂರು: ಹಠಾತ್ ಹಾಗೂ ತೀವ್ರ ಹೃದಯಾಘಾತದ ಪ್ರಕರಣಗಳಲ್ಲಿ ಸುವರ್ಣ ಸಮಯದ ಚಿಕಿತ್ಸೆ ನೀಡಿ ಜೀವ ರಕ್ಷಿಸುವ ಕರ್ನಾಟಕ ರತ್ನ ಡಾ.ಪುನೀತ್ ರಾಜ್ಕುಮಾರ್ ಹೃದಯ ಜ್ಯೋತಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಧಾರವಾಡದಲ್ಲಿಂದು ಚಾಲನೆ ನೀಡಿದರು.

ಕಾರ್ಮಿಕ ಸಚಿವ ಸಂತೋಷ್ ಲಾಡ್, ಶಾಸಕ ಕೋನ ರೆಡ್ಡಿ, ಇಲಾಖೆಯ ಆಯುಕ್ತ ರಂದೀಪ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಅತ್ಯಂತ ಜನಪ್ರಿಯ ನಟ ಡಾ.ಪುನೀತ್ ರಾಜಕುಮಾರ್ ಕೇವಲ ನಟನೆಯಿಂದಷ್ಟೇ ಅಲ್ಲ, ಜನಪರ ಹಾಗೂ ಮಾನವೀಯ ಸೇವೆಗಳ ಮೂಲಕ ಪ್ರಖ್ಯಾತರಾಗಿದ್ದರು. ಅವರಿಗೆ ತೀವ್ರ ಹೃದಯಾಘಾತವಾದಾಗ ಟೆನೆಕ್ಟ್ ಪ್ಲೇಸ್ ಇಂಜೆಕ್ಷನ್ ದೊರೆತಿದ್ದರೆ ಕಿರಿಯ ವಯಸ್ಸಿನಲ್ಲೇ ಸಾವನ್ನಪ್ಪುತ್ತಿರಲಿಲ್ಲ ಎಂದರು.

ಹೃದಯಾಘಾತ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿವೆ. ತುರ್ತು ಸಂದರ್ಭದಲ್ಲಿ ಚಿಕಿತ್ಸೆ ದೊರೆತರೆ ಜೀವರಕ್ಷಣೆ ಸಾಧ್ಯವಾಗಲಿದೆ. ಬಹಳಷ್ಟು ಪ್ರಕರಣಗಳಲ್ಲಿ ಹೃದಯಾಘಾತಕ್ಕೊಳದಾಗ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲೇ ಜೀವಹಾನಿಯಾಗುತ್ತಿದೆ. ಒಂದು ವೇಳೆ ಆಸ್ಪತ್ರೆ ತಲುಪಿದ ಬಳಿಕವೂ ಜೀವ ಉಳಿದರೆ ಹೃದಯ ತೀವ್ರವಾಗಿ ದುರ್ಬಲಗೊಂಡಿರುತ್ತದೆ. ಇದನ್ನು ಮನಗಂಡು ನಮ್ಮ ಸರ್ಕಾರ 71 ತಾಲೂಕು ಹಾಗೂ 15 ಜಿಲ್ಲಾಸ್ಪತ್ರೆಗಳಲ್ಲಿ ಟೆಲಿ ಸಂಪರ್ಕ ಆಧಾರಿತವಾಗಿ ತುರ್ತು ಚಿಕಿತ್ಸೆ ನೀಡುವ ಯೋಜನೆಯನ್ನು ಆರಂಭಿಸಿದೆ ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು