News Karnataka Kannada
Thursday, April 25 2024
Cricket
ಬೆಂಗಳೂರು

ಕ್ಯಾಮರಾ ಲೆನ್ಸ್‌ ಆರ್ಡರ್‌ ಮಾಡಿದವರಿಗೆ ಡೆಲಿವರಿಯಾಗಿದ್ದು ಎಂತ ವಿಚಿತ್ರ ವಸ್ತು ಗೊತ್ತಾ

Do you know what a strange thing was delivered to those who ordered a camera lens worth Rs 90,000?
Photo Credit : Twitter

ಬೆಂಗಳೂರು: ಇತ್ತೀಚೆಗೆ ಆನ್‌ ಲೈನ್‌ ಶಾಪಿಂಗ್‌ ಮಾಡುವವರ ಸಂಖ್ಯೆ ಹೆಚ್ಚಿದೆ. ಅದೇ ರೀತಿ ಆನ್‌ಲೈನ್‌ ಶಾಪಿಂಗ್‌ ಹೆಸರೇಳಿಕೊಂಡು ಮೋಸ ಮಾಡುವವರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಇದೀಗ ಅಮೇಝಾನ್​ನಿಂದ ರೂ. 90,000 ಕ್ಯಾಮೆರಾ ಲೆನ್ಸ್​ ಅನ್ನು ಆರ್ಡರ್​ ಮಾಡಿದ ಒಬ್ಬರಿಗೆ ಲೆನ್ಸ್ ಬದಲಾಗಿ ಕಿನೋವಾ ಬೀಜಗಳು ತಲುಪಿವೆ. ಅರುಣಕುಮಾರ್ ಮೆಹೆರ್​ ಎಂಬುವವರು ತಾವು ಮೋಸ ಹೋದ ಬಗೆಯನ್ನು ಟ್ವೀಟ್‌ ಮೂಲಕ ಹಂಚಿಕೊಂಡಿದ್ದಾರೆ.

ನಾನು ಅಮೇಝಾನ್​ನಿಂದ 90K INR ಕ್ಯಾಮೆರಾ ಲೆನ್ಸ್ ಆರ್ಡರ್ ಮಾಡಿದೆ. ಆದರೆ ಲೆನ್ಸ್​ ಬಾಕ್ಸಿನೊಳಗೆ ಕಿನೋವಾ ಬೀಜಗಳ (Quinoa Seeds) ​ಪ್ಯಾಕೆಟ್ ಕಳುಹಿಸಲಾಗಿದೆ. ಅಮೇಝಾನ್​ ಮತ್ತು ಎಪ್ಪಾರಿಯೋ ರೀಟೇಲ್​ನ ದೊಡ್ಡ ಸ್ಕ್ಯಾಮ್​ ಇದು ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಅರುಣಕುಮಾರ್​ ಜು. 5ರಂದು ಅಮೇಝಾನ್​ನಿಂದ ಸಿಗ್ಮಾ 24/70 F 2.8 ಲೆನ್ಸ್​ ಆರ್ಡರ್​ ಮಾಡಿದ್ದರು. ಆದ ಸಮಸ್ಯೆಯನ್ನು ಅವರು ಅಮೇಝಾನ್​ಗೆ ಟ್ಯಾಗ್​ ಮಾಡಿ ಟ್ವೀಟ್ ಮಾಡಿದ್ದರು. ಅಮೇಝಾನ್​ ಈ ಬಗ್ಗೆ ತನಿಖೆ ನಡೆಸುತ್ತಿದೆ ಪ್ರತಿಕ್ರಿಯಿಸಿದೆಯಾದರೂ, ಅರುಣಕುಮಾರ್, ಲೆನ್ಸ್​ ಕಳುಹಿಸಿ ಇಲ್ಲವೆ ಹಣವನ್ನು ಮರುಪಾವತಿಸಿ ಎಂದು ಮರುಟ್ವೀಟ್ ಮಾಡಿದ್ದಾರೆ. ಜು.7ರಂದು ಮಾಡಿದ ಈ ಟ್ವೀಟ್ ಅನ್ನು 1.3 ಲಕ್ಷಕ್ಕಿಂತಲೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಸುಮಾರು 300 ಜನರು ರೀಟ್ವೀಟ್ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು