Bengaluru 20°C

ಡೆಂಗ್ಯೂ ಜತೆಗೆ ಬೆಂಗಳೂರಿಗೆ ಜಿಕಾ ವೈರಸ್, ಮಂಕಿಪಾಕ್ಸ್ ಭೀತಿ !

Zika

ಬೆಂಗಳೂರು: ರಾಜಧಾನಿ ಬೆಂಗಳೂರಿಗೆ ಈ ವರ್ಷ ಒಂದಲ್ಲ ಒಂದು ವೈರಸ್​​ಗಳ ಹಾವಳಿ ಜೋರಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಡೆಂಗ್ಯೂ ಜ್ವರ ವಿಪರೀತ ಹರಡಿತ್ತು. ಈಗ ಕಳೆದ ಕೆಲ ದಿನಗಳಿಂದ ಪ್ರಕರಣಗಳ ಸಂಖ್ಯೆ ಕಡಿಮೆಯಾದರೂ ಡೆಂಗ್ಯೂ ಪಾಸಿಟಿವಿಟಿ ಪ್ರಮಾಣ ಕಡಿಮೆಯಾಗಿಲ್ಲ. ಈಮಧ್ಯೆ ಈಗ ರಾಜ್ಯಕ್ಕೆ ಮತ್ತೆರಡು ಹೊಸ ವೈರಸ್ ಆತಂಕ ಕಂಡು ಬಂದಿದೆ. ಬೆಂಗಳೂರಿನ ಹೊರಭಾಗದಲ್ಲಿರುವ ಜಿಗಣಿ ಇಂಡಸ್ಟ್ರೀಯಲ್ ಏರಿಯಾಲ್ಲಿ ಕಳೆದ ವಾರ ಐದು ಹೊಸ ಜಿಕಾ ಪ್ರಕರಣಗಳು ಪತ್ತೆಯಾಗಿದ್ದು ಆರೋಗ್ಯ ಇಲಾಖೆಯ ಆತಂಕ ಹೆಚ್ಚಿಸಿದೆ.


ಕೆಲವು ದಿನಗಳ ಹಿಂದೆಯಷ್ಟೇ ಕೇರಳದಲ್ಲಿ ಜಿಕಾ ವೈರಸ್ ಆತಂಕ ಮೂಡಿಸಿತ್ತು. ಇದೇ ವೈರಸ್ ಈಗ​ ರಾಜ್ಯದಲ್ಲಿ ಸೊಳ್ಳೆಗಳಲ್ಲಿ ಪತ್ತೆಯಾಗಿದೆ. ಜಿಗಣಿಯಲ್ಲಿ ಪತ್ತೆಯಾಗಿರುವ ಡೆಡ್ಲಿ ವೈರಸ್​​​ ಈಗ ರಾಜ್ಯದಲ್ಲೂ ಆತಂಕ ಹೆಚ್ಚಿಸಿದ್ದು ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಲು ಆರಂಭದಲ್ಲಿಯೇ ಜಿಕಾ ಹರಡದಂತೆ ಬ್ರೇಕ್ ಹಾಕಲು ಮಾರ್ಗಸೂಚಿ ಬಿಡುಗಡೆ ಮಾಡಿದೆ.


ಜಿಕಾ ವೈರಸ್ ಸೋಂಕಿನ ಲಕ್ಷಣಗಳೇನು?
ಜ್ವರ, ಚರ್ಮದ ದದ್ದು, ಕಾಂಜಂಕ್ಟಿವಿಟಿಸ್
ತಲೆ ನೋವು ಹಾಗೂ ಕಣ್ಣು ಕೆಂಪಾಗುವುದು
ಸ್ನಾಯು ಮತ್ತು ಕೀಲು ನೋವು
ಅಸ್ವಸ್ಥತೆ ಅಥವಾ ತಲೆನೋವು
ಈ ಲಕ್ಷಣಗಳು ಸಾಮಾನ್ಯವಾಗಿ 2-7 ದಿನಗಳವರೆಗೆ ಇರುತ್ತದೆ
ಡೆಂಗ್ಯೂ ಜ್ವರದ ಲಕ್ಷಣಗಳ ಸಾಮ್ಯತೆ ಇರುತ್ತೆ


ಮಂಕಿಪಾಕ್ಸ್ ಲಕ್ಷಣಗಳು ಏನು?
ದೇಹದ ಮೇಲೆ ಗುಳ್ಳೆ ತರದ ರಾಶ್​​ಗಳು
ಮೈ ಮೇಲೆ ಗುಳ್ಳೆಗಳ ಜತೆ ಜ್ವರದ ಲಕ್ಷಣಗಳು
ತೀವ್ರವಾದ ತಲೆ ನೋವು, ಬೆನ್ನು ನೋವು ಸ್ನಾಯು ನೋವು
2 ವಾರದಿಂದ 4 ವಾರಗಳ ಕಾಲ ಬಾಧಿಸುವ ಸೋಂಕು
ಶೀತ, ಜ್ವರ, ಸ್ನಾಯು ದೌರ್ಬಲ್ಯ,
ಊತ, ಚರ್ಮದ ಮೇಲೆ ಗುಳ್ಳೆ ಬಳಲಿಕೆ


ಇನ್ನು ಜಿಕಾ ಹಾಗೂ ಮಂಕಿಪಾಕ್ಸ್ ಸದ್ಯ ಎಲ್ಲಡೆ ಆತಂಕ ಸೃಷ್ಟಿ ಮಾಡಿವೆ. ನಿರ್ದಿಷ್ಟವಾದ ಚಿಕಿತ್ಸೆ ಇಲ್ಲದ ಕಾರಣ ಕೊಂಚ ಆತಂಕ ಹೆಚ್ಚಿಸಿವೆ. ಸದ್ಯ ಭಾರತದಲ್ಲಿ ಹೆಚ್ಚಾಗಿ ಪ್ರಕರಣ ಕಾಣಿಸಿಲ್ಲ. ಆದರೆ ಇದು ಭಾರತಕ್ಕೆ ಕಾಲಿಡದಂತೆ ಎಚ್ಚರಿಕೆ ವಹಿಸಬೇಕಿದೆ.


Nk Channel Final 21 09 2023