Bengaluru 28°C
Ad

ಲಡ್ಡು ವಿವಾದ ; ತಿರುಪತಿ ಟಿಟಿಡಿಯಿಂದ ನಂದಿನಿ ತುಪ್ಪಕ್ಕೆ ಹೆಚ್ಚಾಯ್ತು ಬೇಡಿಕೆ

ತಿರುಪತಿ ಪ್ರಸಾದದಲ್ಲಿ  ಕಲಬೆರಕೆ ವಿವಾದಕ್ಕೆ ಸಂಬಂಧಿಸಿದಂತೆ ನಾಳೆಯಿಂದ 3 ದಿನಗಳ ಕಾಲ ಮಹಾಶಾಂತಿಯಾಗ ನಡೆಸಲು ಟಿಟಿಡಿ ನಿರ್ಧರಿಸಿದೆ. ನಾಳೆಯಿಂದ ಶುದ್ಧಿಗೊಳಿಸುವ ಪ್ರಕ್ರಿಯೆ ನಡೆಯಲಿದೆ. ಈ ಯಾಗದಲ್ಲಿ ವೇದ ವಿದ್ವಾಂಸರ ಜೊತೆ ಋತ್ವಿಜರು ಸಹ ಭಾಗಿಯಾಗಲಿದ್ದಾರೆ. ಇದರ ನಡುವೆಯೇ ಟಿಟಿಡಿಯಿಂದ ಹೆಚ್ಚುವರಿ ನಂದಿನಿ ತುಪ್ಪಕ್ಕೆ ಬೇಡಿಕೆ ಬಂದಿದೆ. ಹೆಚ್ಚುವರಿ ತುಪ್ಪ ನೀಡುವಂತೆ ಕೆಎಂಎಫ್ ಗೆ ಟಿಟಿಡಿ ಮನವಿ ಮಾಡಿದೆ.

ಬೆಂಗಳೂರು: ತಿರುಪತಿ ಪ್ರಸಾದದಲ್ಲಿ  ಕಲಬೆರಕೆ ವಿವಾದಕ್ಕೆ ಸಂಬಂಧಿಸಿದಂತೆ ನಾಳೆಯಿಂದ 3 ದಿನಗಳ ಕಾಲ ಮಹಾಶಾಂತಿಯಾಗ ನಡೆಸಲು ಟಿಟಿಡಿ ನಿರ್ಧರಿಸಿದೆ. ನಾಳೆಯಿಂದ ಶುದ್ಧಿಗೊಳಿಸುವ ಪ್ರಕ್ರಿಯೆ ನಡೆಯಲಿದೆ. ಈ ಯಾಗದಲ್ಲಿ ವೇದ ವಿದ್ವಾಂಸರ ಜೊತೆ ಋತ್ವಿಜರು ಸಹ ಭಾಗಿಯಾಗಲಿದ್ದಾರೆ. ಇದರ ನಡುವೆಯೇ ಟಿಟಿಡಿಯಿಂದ ಹೆಚ್ಚುವರಿ ನಂದಿನಿ ತುಪ್ಪಕ್ಕೆ ಬೇಡಿಕೆ ಬಂದಿದೆ. ಹೆಚ್ಚುವರಿ ತುಪ್ಪ ನೀಡುವಂತೆ ಕೆಎಂಎಫ್ ಗೆ ಟಿಟಿಡಿ ಮನವಿ ಮಾಡಿದೆ.

ಈಗಾಗಲೇ ಟಿಟಿಡಿಗೆ ಕೆಎಂಎಫ್​ ನಂದಿನಿ ತುಪ್ಪ ಪೂರೈಸುತ್ತಿದ್ದು, ಇದೀಗ ಟಿಟಿಡಿ 3 ಟ್ಯಾಂಕರ್​​ ಹೆಚ್ಚುವರಿ ತುಪ್ಪಕ್ಕೆ ಬೇಡಿಕೆ ಇಟ್ಟಿದೆ. ಈಗಾಗಲೇ ಕೆಎಂಎಫ್​ 3 ಟ್ಯಾಂಕರ್ ತುಪ್ಪ ಪೂರೈಕೆ ಮಾಡುತ್ತಿದ್ದು, 1 ಟ್ಯಾಂಕರ್​ನಲ್ಲಿ 20 ಸಾವಿರ ಕೆಜಿ ತುಪ್ಪ ಪೂರೈಕೆ ಮಾಡಲಾಗುತ್ತಿದೆ. ಈಗ ಮತ್ತೆ ಹೆಚ್ಚುವರಿಯಾಗಿ 60 ಸಾವಿರ ಕೆಜಿ ತುಪ್ಪಕ್ಕೆ ಬೇಡಿಕೆ ಬಂದಿದ್ದು, ಒಟ್ಟಾರೆ ನಂದಿನಿಯಿಂದ 6 ಟ್ಯಾಂಕರ್​ ತುಪ್ಪ ಪೂರೈಕೆಗೆ ಮನವಿ ಮಾಡಲಾಗಿದೆ. ಇದರೊಂದಿಗೆ ಕೆಎಂಎಫ್​​ ನಿಂದ ಟಿಟಿಡಿಗೆ ಒಂದು ಲಕ್ಷ ಇಪತ್ತು ಸಾವಿರ ಕೆಜಿ ತುಪ್ಪ ಪೂರೈಕೆ ಮಾಡಲಾಗುತ್ತದೆ ಕೆಎಂಎಫ್​​ ಎಂಡಿ ಜಗದೀಶ್​​ ಮಾಹಿತಿ ನೀಡಿದ್ದಾರೆ.

 

Ad
Ad
Nk Channel Final 21 09 2023