ದಾವಣಗೆರೆ: ಇತ್ತೀಚೆಗೆ ಆನ್ಲೈನ್ ವಂಚನೆ ಜಾಲ ಹೆಚ್ಚುತ್ತಿದೆ. ಪೊಲೀಸರು ಎಷ್ಟೇ ಎಚ್ಚರಿಕೆ ನೀಡಿದರೂ ಕೂಡ ಮೋಸ ಹೋಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಹೊರತು ಕಡಿಮೆಯಾಗುತ್ತಿಲ್ಲ. ಅದೇ ರೀತಿ ಕಮಿಷನ್ ಆಸೆಗೆ ಬಿದ್ದು ಓರ್ವ ಮಹಿಳೆ 18.66 ಲಕ್ಷ ರೂಪಾಯಿ ಕಳೆದುಕೊಂಡಿರುವಂತಹ ಘಟನೆ ನಗರದ ಕೆಕೆ ಬಡಾವಣೆಯಲ್ಲಿ ನಡೆದಿದೆ.
ಜ್ಯೋತಿ ಹಣ ಕಳೆದುಕೊಂಡ ಮಹಿಳೆ. ಆನ್ಲೈನ್ ಮೂಲಕ ಕಂಪನಿಯೊಂದರ ವಸ್ತುಗಳನ್ನ ಖರೀದಿಸಿ ಬೇರೆಯವರಿಗೆ ಮಾರಾಟ ಮಾಡಿದರೆ ಭರ್ಜರಿ ಕಮಿಷನ್ ಸಿಗುತ್ತದೆ ಎಂದು ಕಂಪನಿ ಪ್ರತಿನಿಧಿಗಳು ಹೇಳಿದ್ದಾರೆ.
ಇದನ್ನ ನಂಬಿ 18.66 ಲಕ್ಷ ರೂಪಾಯಿ ತುಂಬಿದ್ದಾರೆ. ಇನ್ನೂ ಹಲವಾರು ಮಹಿಳೆಯರಿಂದ ಆನ್ ಲೈನ್ ವಂಚನೆ ಆಗಿರುವ ಶಂಕೆ ವ್ಯಕ್ತವಾಗಿದೆ. ದಾವಣಗೆರೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.