News Karnataka Kannada
Monday, April 29 2024
ದಾವಣಗೆರೆ

ಅಡಿಕೆ ಹಾಗೂ ಬಾಳೆ ಗಿಡಗಳಿಗೆ ಬೆಂಕಿ ಇಟ್ಟ ಕಿಡಿಗೇಡಿಗಳು

ದಾವಣಗೆರೆ ತಾಲೂಕಿನ ಹುಣಸಡಕಟ್ಟೆ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಅಡಿಕೆ ಹಾಗೂ ಬಾಳೆ ಗಿಡಗಳು ಬೆಂಕಿಗಾಹುತಿಯಾದ ಘಟನೆ  ನಡೆದಿದೆ.
Photo Credit : News Kannada

ದಾವಣಗೆರೆ: ದಾವಣಗೆರೆ ತಾಲೂಕಿನ ಹುಣಸಡಕಟ್ಟೆ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಅಡಿಕೆ ಹಾಗೂ ಬಾಳೆ ಗಿಡಗಳು ಬೆಂಕಿಗಾಹುತಿಯಾದ ಘಟನೆ  ನಡೆದಿದೆ.

ವಿಶ್ವನಾಥ್​ ಎಂಬುವವರಿಗೆ ಸೇರಿದ ತೋಟ ಇದಾಗಿದ್ದು, 1,300 ಅಡಿಕೆ ಹಾಗೂ 1,400 ಬಾಳೆ ಗಿಡಗಳು ಸುಟ್ಟು ಭಸ್ಮವಾಗಿದೆ.

ರೈತನ ಕುಟುಂಬ ಗ್ರಾಮದಲ್ಲಿ ಇಲ್ಲದನ್ನ ತಿಳಿದ ಕಿಡಿಗೇಡಿಗಳು, ದ್ವೇಷದಿಂದ ಬೆಂಕಿ ಇಟ್ಟ ಶಂಕೆ ವ್ಯಕ್ತವಾಗಿದೆ. ಇನ್ನು ಸ್ಥಳೀಯರು ಸೇರಿ ಅರ್ಧ ಅಡಿಕೆ ಹಾಗೂ ಬಾಳೆ ತೋಟವನ್ನು ಬೆಂಕಿಯಿಂದ ಉಳಿಸಿದ್ದಾರೆ.

ಇನ್ನು ಕಳೆದ ವರ್ಷ ಇದೇ ತೋಟದಿಂದ ಬರೊಬ್ಬರಿ ಎಳು‌ ಲಕ್ಷ ರೂಪಾಯಿ ಆದಾಯ ಬಂದಿತ್ತು. ಅದೇ ಹೊಟ್ಟೆಕಿಚ್ಚಿನಿಂದ ಫಲಕ್ಕೆ ಬಂದ ಅಡಿಕೆ ಮರಗಳಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಶಂಕೆ ಇದೆ.

ಈ ಕುರಿತು ರೈತ ವಿಶ್ವನಾಥ್​ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು‌ ನೀಡಿದ್ದು, ಪೊಲೀಸರು ತನಖೆ ಆರಂಭಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು