ದಾವಣಗೆರೆ

ದಾವಣಗೆರೆ: ಸರ್ಕಾರಿ ಮಹಿಳಾ ಆಸ್ಪತ್ರೆಯಲ್ಲಿ ನವಜಾತ ಶಿಶು ನಾಪತ್ತೆ

ದಾವಣಗೆರೆ : ಇಲ್ಲಿನ ಕೆ.ಆರ್‌. ಮಾರ್ಕೆಟ್‌ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬುಧವಾರ ಜನಿಸಿದ ನವಜಾತ ಗಂಡು ಶಿಶು ನಾಪತ್ತೆಯಾಗಿದೆ. ನರ್ಸ್‌ಗಳ ನಿರ್ಲಕ್ಷ್ಯವೇ ಮಗು ನಾಪತ್ತೆಗೆ ಕಾರಣ ಎಂದು ಹೆತ್ತವರು ಆರೋಪಿಸಿದ್ದಾರೆ.

ಜಬಿವುಲ್ಲಾ-ಉಮ್ಮಿಸಲ್ಮಾ ದಂಪತಿಯ ಮಗು ಇದಾಗಿದ್ದು, ಬುಧವಾರ ಹೆರಿಗೆಯಾದ ಬಳಿಕ ನರ್ಸ್‌ ಬಂದು ಮಗುವನ್ನು ಐಸಿಯುಗೆ ಒಯ್ದಿದ್ದರು. ಬಳಿಕ ಎಲ್ಲ ಪರೀಕ್ಷೆಗಳು ಮುಗಿದ ಬಳಿಕ ಹೆತ್ತವರ ಕೈಗೆ ಮಗುವನ್ನು ನೀಡುವ ಬದಲು ಯಾವುದೋ ಮಹಿಳೆ ಕೈಗೆ ನೀಡಿದ್ದಾರೆ. ಆ ಮಹಿಳೆ ಮಗುವನ್ನು ತೆಗೆದುಕೊಂಡು ಹೋಗಿದ್ದಾರೆ.

‘ನಾವೆಲ್ಲ ವಾರ್ಡ್‌ನಲ್ಲೇ ಇದ್ದೆವು. ಇಲ್ಲಿಗೆ ಬಂದು ಮಗುವನ್ನು ನರ್ಸ್‌ ಒಯ್ದಿದ್ದಾರೆ. ವಾಪಸ್‌ ಇಲ್ಲೇ ತಂದು ಕೊಡಬೇಕಿತ್ತು. ಇಲ್ಲವೇ ನಮ್ಮನ್ನು ಕರೆಯಬೇಕಿತ್ತು. ಯಾರೋ ಮಹಿಳೆ ಬಂದರು ಎಂದು ಅವರ ಕೈಗೆ ಮಗುವನ್ನು ಏಕೆ ನೀಡಿದರು? ಅವರ ಉದ್ದೇಶವೇನು ಎಂಬುದೇ ಅರ್ಥವಾಗುತ್ತಿಲ್ಲ’ ಎಂದು ಹೆತ್ತವರ ಸಂಬಂಧಿ ಶಿರಿನ್‌ಬಾನು ತಿಳಿಸಿದರು.

‘ಮಗುವನ್ನು ತೆಗೆದುಕೊಂಡು ಹೋಗಿ ಎಂದು ನರ್ಸ್‌ ಕೂಗಿದಾಗ ಬುರ್ಕಾ ಹಾಕಿದ್ದ ಮಹಿಳೆಯೊಬ್ಬರು ಬಂದು ನಮ್ಮ ಮಗು ಎಂದು ಕೈ ಚಾಚಿದರು. ಅವರಿಗೆ ನೀಡಿರುವುದಾಗಿ ನರ್ಸ್‌ ತಿಳಿಸಿದ್ದಾರೆ. ನಾನು ಆ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಇರಲಿಲ್ಲ. ಶನಿವಾರ ಬೆಳಿಗ್ಗೆ ಸಿಸಿಟಿವಿ ಕ್ಯಾಮೆರಾದ ಫೂಟೇಜ್‌ ಪರಿಶೀಲಿಸುತ್ತೇನೆ’ ಎಂದು ಆಸ್ಪತ್ರೆಯ ಅಧೀಕ್ಷಕ ಡಾ.ನೀಲಕಂಠ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಮಗು ಕಳೆದುಕೊಂಡವರು ದೂರು ನೀಡಲು ಬುಧವಾರ ರಾತ್ರಿ ಬಸವನಗರ ಪೊಲೀಸ್‌ ಠಾಣೆಗೆ ತೆರಳಿದ್ದಾರೆ.

Gayathri SG

Recent Posts

ಜರ್ಮಿನಿಯಿಂದ ಲಂಡನ್‌ಗೆ ಹಾರಿದ ಪ್ರಜ್ವಲ್​ ರೇವಣ್ಣ

ಅಶ್ಲೀಲ ವಿಡಿಯೋ, ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ದೇಶಕ್ಕೆ ಹೋಗಿದ್ದು, ಇಲ್ಲಿಯವರೆಗು ಜರ್ಮನಿಯಲ್ಲಿದ್ದಾರೆ ಎಂದು…

14 mins ago

ನ್ಯಾಚುರಲ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ್ ಕಾಮತ್ ನಿಧನ

ಮುಂಬಯಿಯ ನ್ಯಾಚುರಲ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ್ ಕಾಮತ್ (75) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ರಾತ್ರಿ ನಿಧನರಾದರು.

37 mins ago

ಚಲಿಸುತ್ತಿದ್ದ ಬಸ್‌ನಲ್ಲಿ ಬೆಂಕಿ: 10 ಮಂದಿ ಸಜೀವ ದಹನ

ಬಸ್‌ಗೆ ಬೆಂಕಿ ಹತ್ತಿಕೊಂಡು 10 ಮಂದಿ ಮೃತಪಟ್ಟು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ  ಹರಿಯಾಣದ ಕುಂಡಲಿ-ಮನೇಸರ್-ಪಲ್ವಾಲ್ ಎಕ್ಸ್‌ಪ್ರೆಸ್‌ ವೇಯಲ್ಲಿ…

53 mins ago

11 ತಿಂಗಳಿನಲ್ಲಿ ಬರೋಬ್ಬರಿ 5.38 ಕೋಟಿ ದಂಡ ವಸೂಲಿ ಮಾಡಿದ ಬಿಎಂಆರ್‌ಸಿಎಲ್‌

ನಮ್ಮ ಮೆಟ್ರೋದಲ್ಲಿ ಸುರಕ್ಷತೆ, ಭದ್ರತೆ ದೃಷ್ಟಿಯಿಂದ ಹಲವಾರು ನೀತಿ ನಿಯಮಗಳನ್ನು ಬಿಎಂಆರ್‌ಸಿಎಲ್‌ ಜಾರಿ ಮಾಡಿದೆ. ಬರೀ ನಿಯಮ ಮಾಡಿದ್ದು ಮಾತ್ರವಲ್ಲದೇ…

1 hour ago

ಆರ್‌ಸಿಬಿ ಸಿಎಸ್‌ಕೆ ಹೈವೋಲ್ಟೇಜ್ ಪಂದ್ಯ: ಸೈಬರ್‌ ಖದೀಮರಿಂದ ವಂಚನೆ

ಇಂದು ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆಗಿದೆ. ಆದರೆ ಈ ಪಂದ್ಯದ ಟಿಕೆಟ್‌ ನೀಡುತ್ತೇವೆ…

2 hours ago

ದೇಶಿಯ ಮದ್ಯಗಳ ಬೆಲೆ ಹೆಚ್ಚಿಸಲು ಮುಂದಾದ ಸರಕಾರ

ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದು ಸರಕಾರಕ್ಕೆ ಸವಾಲಾಗಿದ್ದು, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ದೇಶಿಯ ಮದ್ಯಗಳ ಬೆಲೆ ಹೆಚ್ಚಿಸಲು…

2 hours ago