News Karnataka Kannada
Tuesday, April 16 2024
Cricket
ದಾವಣಗೆರೆ

ಕಾಂಗ್ರೆಸ್‌ ಮುಳುಗುತ್ತಿರುವ ಹಡಗು; ಬಿ.ಎಸ್‌. ಯಡಿಯೂರಪ್ಪ

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಎಫ್​ಐಆರ್ ದಾಖಲಾಗಿದೆ.
Photo Credit :

ದಾವಣಗೆರೆ : ‘ಬಿಜೆಪಿಗೆ ನರೇಂದ್ರ ಮೋದಿ ಇದ್ದಾರೆ. ಕಾಂಗ್ರೆಸ್‌ನವರಿಗೆ ಯಾರಿದ್ದಾರೆ? ಅವರು ತಬ್ಬಲಿ ಮಕ್ಕಳು’ ಎಂದು ಬಿಜೆಪಿ ರಾಜ್ಯ ನಾಯಕ ಬಿ.ಎಸ್‌. ಯಡಿಯೂರಪ್ಪ ವ್ಯಂಗ್ಯವಾಡಿದರು.

ನಗರದಲ್ಲಿ ಬುಧವಾರ ಮಾತನಾಡಿದ ಅವರು, ‘ಕಾಂಗ್ರೆಸ್‌ ದೇಶದಾದ್ಯಂತ ನೆಲೆ ಕಳೆದುಕೊಂಡಿದೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಸ್ಪರ್ಧಿಸಿದ ಕ್ಷೇತ್ರಗಳಲ್ಲಿ 377 ಕಡೆ ಠೇವಣಿಯನ್ನು ಕಳೆದುಕೊಂಡಿದೆ. 2 ಕಡೆ ಮಾತ್ರ ಗೆದ್ದಿದ್ದಾರೆ. ರಾಜ್ಯದಲ್ಲಿ ಇನ್ನೂ ಸ್ವಲ್ಪ ಉಸಿರಾಡುತ್ತಿದೆ. ಅದೇ ಕಾರಣದಿಂದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಏನೇನೋ ಮಾತನಾಡುತ್ತಿದ್ದಾರೆ. ಮುಂದಿನ ಚುನಾವಣೆಯ ನಂತರ ಇಲ್ಲೂ ಉಸಿರು ನಿಂತು ಹೋಗಲಿದೆ. ಇದು ದುರಹಂಕಾರದ ಮಾತಲ್ಲ. ರಾಜ್ಯದಲ್ಲಿ ಈಗ ಬಿಜೆಪಿಗಿರುವ ಅನುಕೂಲಕರ ವಾತಾವರಣ ಹಾಗಿದೆ. ಕಾಂಗ್ರೆಸ್‌ ಮುಳುಗುತ್ತಿರುವ ಹಡಗು’ ಎಂದು ತಿಳಿಸಿದರು.

ಕಂದಾಯ ಸಚಿವ ಆರ್. ಅಶೋಕ್‌, ‘ನಮ್ಮಲ್ಲಿ ಮೋದಿ, ಅಮಿತ್‌ ಶಾ, ನಡ್ಡಾ ಮುಂತಾದ ಕೇಂದ್ರ ನಾಯಕರು ಬಂದು ಭಾಷಣ ಮಾಡುತ್ತಾರೆ. ಕಾಂಗ್ರೆಸ್‌ನಲ್ಲಿ ಯಾರೂ ಇಲ್ಲ. ರಾಹುಲ್‌ ಗಾಂಧಿ ಬಂದು ಭಾಷಣ ಮಾಡಿದರೆ ಇದ್ದ ವೋಟು ಕಳೆದುಕೊಳ್ಳುತ್ತಾರೆ’ ಎಂದು ಅಣಕಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು