Ad

ದರ್ಶನ್​ ಖೈದಿ ಸಂಖ್ಯೆ 6106; ಈ ನಂಬರ್​ನಲ್ಲೇ ವಾಹನ ನೋಂದಣಿಗೆ ಹೆಚ್ಚಿದೆ ಬೇಡಿಕೆ

Darshan (2)

ಬೆಂಗಳೂರು: ನಟ ದರ್ಶನ್​ ಅವರನ್ನು ಅಪಾರವಾಗಿ ಪ್ರೀತಿಸುವ ಅಭಿಮಾನಿಗಳು ಇದ್ದಾರೆ. ಇತ್ತೀಚೆಗೆ ದರ್ಶನ್​ ಅವರು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದರೂ ಕೂಡ ಅವರ ಪರವಾಗಿಯೇ ಕೆಲವು ಫ್ಯಾನ್ಸ್​ ಜೈಕಾರ ಕೂಗುತ್ತಿದ್ದಾರೆ.

Ad
300x250 2

ಸೋಶಿಯಲ್​ ಮೀಡಿಯಾದಲ್ಲಿ ದರ್ಶನ್​ ಅಭಿಮಾನಿಗಳು ಇನ್ನಷ್ಟು ಆ್ಯಕ್ಟೀವ್​ ಆಗಿದ್ದಾರೆ. ಅಚ್ಚರಿ ಏನೆಂದರೆ, ದರ್ಶನ್​ಗೆ ಜೈಲಿನಲ್ಲಿ ನೀಡಿದ ಖೈದಿ ನಂಬರ್​ ಕೂಡ ಈಗ ಅಭಿಮಾನಿಗಳ ಪಾಲಿನ ಲಕ್ಕಿ ನಂಬರ್​ ಆಗುತ್ತಿದೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎ2 ಆಗಿರುವ ದರ್ಶನ್​ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ಅವರು ವಿಚಾರಣಾಧೀನ ಖೈದಿ ಆಗಿದ್ದಾರೆ. ಅವರಿಗೆ 6106 ಖೈದಿ ನಂಬರ್​ ನೀಡಲಾಗಿದೆ. ಈ ನಂಬರ್​ ಮೇಲೆ ಕೆಲವು ಅಭಿಮಾನಿಗಳಿಗೆ ಆಕರ್ಷಣೆ ಹೆಚ್ಚಿದೆ. ಇದೇ ನಂಬರ್​ನಲ್ಲಿ ಹೊಸ ವಾಹನಗಳ ನೋಂದಣಿ ಮಾಡಿಸಿಕೊಳ್ಳಲು ಕೆಲವು ಫ್ಯಾನ್ಸ್​ ಮುಂದಾಗಿದ್ದಾರೆ ಎನ್ನಲಾಗಿದೆ.

Ad
Ad
Nk Channel Final 21 09 2023
Ad