Bengaluru 23°C
Ad

ಕ್ಯಾಮೆರಾ ನೋಡಿ, ಅಸಹ್ಯವಾಗಿ ಸಂಜ್ಞೆ ಮಾಡಿದ್ರಾ ದರ್ಶನ್ ?

Darshan (4)

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಬರೋಬ್ಬರಿ ಮೂರು ತಿಂಗಳಿನಿಂದ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ ನಟ. ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ದರ್ಶನ್‌ನನ್ನು ಭೇಟಿ ಮಾಡಲು ಬಂದ ವಕೀಲರನ್ನು ಭೇಟಿಯಾಗಲು ಹೈಸೆಕ್ಯೂರಿಟಿ ಜೈಲಿನಿಂದ ಹೊರಗೆ ಬರುವಾಗ ಮಾಧ್ಯಮಗಳ ಕ್ಯಾಮೆರಾಗಳನ್ನು ನೋಡಿ ಕೈಗಳ ಮಧ್ಯದ ಬೆರಳನ್ನು ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗ್ತಿದೆ.

ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ನಟ ದರ್ಶನ್ ಕೆಲವು ದಿನಗಳ ಹಿಂದೆ ಮಾಧ್ಯಮಗಳಲ್ಲಿ ಏನೆಲ್ಲಾ ವರದಿಗಳು ಪ್ರಸಾರ ಆಗುತ್ತಿವೆ ಎಂಬುದನ್ನು ನೋಡಲು ಟಿವಿಯನ್ನು ತರಿಸಿಕೊಂಡಿದ್ದಾರೆ. ಆದರೆ, ತಮ್ಮ ವಿರುದ್ಧ ಮಾಧ್ಯಮಗಳು ವರದಿ ಮಾಡುತ್ತಿರುವುದನ್ನು ಕಂಡು ಪುನಃ ಕೆರಳಿದಂತಾಗಿದ್ದಾರೆ. ಇನ್ನು ಇಂದು ಬೆಳಗ್ಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಬಂದಾಗ ಫುಲ್ ಸಾಫ್ಟ್ ಆಗಿ ನಡೆದುಕೊಂಡಿದ್ದರು. ಆದರೆ, ಮಧ್ಯಾಹ್ನದ ವೇಲೆ ವಕೀಲರು ಭೇಟಿ ಮಾಡಲು ಬಂದಾಗ, ಹೈ ಸೆಕ್ಯೂರಿಟಿ ಜೈಲಿನಿಂದ ಸಂದರ್ಶಕರ ಕೊಠಡಿಗೆ ಬರುವಾಗ ಮಾಧ್ಯಮಗಳ ಕ್ಯಾಮೆರಾಗಳನ್ನು ನೋಡಿ, ಮಿಡಲ್ ಫಿಂಗರ್ ತೋರಿಸಿ ಅಸಭ್ಯ ವರ್ತನೆ ತೋರಿದ್ದಾರೆ ಎಂದು ತಿಳಿದುಬಂದಿದೆ.

Ad
Ad
Nk Channel Final 21 09 2023