Ad

ದರ್ಶನ್‌ ಆರ್‌.ಆರ್‌ ನಗರದ ಮನೆ ಮೇಲೆ ಬುಲ್ಡೋಜರ್‌ ಅಸ್ತ್ರ?

Darshan

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಅರೆಸ್ಟಾಗಿರೋ ನಟ ದರ್ಶನ್‌ ಅವರ ಮನೆಗೂ ಕಂಟಕ ಕಾದಿದ್ಯಾ? ದರ್ಶನ್ ಅರೆಸ್ಟಾಗಿರೋವಾಗ್ಲೇ ಅವ್ರ ಮನೆ ನೆಲಸಮ ಆಗ್ಬಿಡುತ್ತಾ? ಸರ್ಕಾರ ದರ್ಶನ್‌ ಆರ್‌.ಆರ್‌ ನಗರದ ಮನೆ ಮೇಲೆ ಬುಲ್ಡೋಜರ್‌ ಹರಿಸಿಬಿಡುತ್ತಾ? ಹೀಗೊಂದು ಪ್ರಶ್ನೆ ಮೂಡೋದಕ್ಕೆ ಕಾರಣವಾಗಿರೋದು ಡಿಸಿಎಂ ಡಿ.ಕೆ ಶಿವಕುಮಾರ್ ನೀಡಿರೋ ಹೇಳಿಕೆ.

Ad
300x250 2

ರೇಣುಕಾಸ್ವಾಮಿ ಕೊಲೆ ಕೇಸ್​ ಹೆಗಲ ಮೇಲೆ ಹೊತ್ತು ಜೈಲಲ್ಲಿರೋ ದರ್ಶನ್​ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಇದಕ್ಕೆ ಕಾರಣ, ರಾಜರಾಜೇಶ್ವರಿ ನಗರದ ರಾಜಕಾಲುವೆ ಮೇಲೆ ದರ್ಶನ್ ಮನೆ ತಲೆ ಎತ್ತಿ ನಿಂತಿರೋದು. ಆದರೆ ಇದು ಇಂದು ನಿನ್ನೆಯ ವಿಚಾರವಲ್ಲ. ಕಳೆದ 8 ವರ್ಷಗಳ ಹಿಂದೆಯಿಂದಲೇ ಸುದ್ದಿಯಲ್ಲಿದೆ.

ಹೌದು 2016ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಿದವರ ವಿರುದ್ಧ ಸಮರ ಸಾರಿತ್ತು. ಒತ್ತುವರಿ ಮಾಡಿದ್ದ ಜಾಗ ತೆರವು ಮಾಡುವಂತೆ ಬಿಬಿಎಂಪಿಗೆ ನಿರ್ದೇಶನ ನೀಡಿತ್ತು. ಅದರಂತೆ ಸರ್ಕಾರ ಭೂ ದಾಖಲೆಗಳ ಪ್ರಕಾರ ಆರ್‌ ಆರ್‌ ನಗರದ ದರ್ಶನ್‌ ನಿವಾಸ
ಪ್ರಾಥಮಿಕ ಕಾಲುವೆಯ ಬಫರ್‌ ಝೋನ್‌ ಮೇಲೆ ನಿರ್ಮಿಸಿರುವುದು ಪತ್ತೆಯಾಗಿದೆ.

ಈ ಕಟ್ಟಗಳನ್ನ ತೆರವುಗೊಳಿಸಲು ನೋಟಿಸ್‌ ನೀಡಿ 15 ದಿನಗಳ ಕಾಲಾವಕಾಶ ನೀಡಲಾಗಿತ್ತು. ಆದರೆ ನೋಟಿಸ್‌ ನೀಡ್ತಿದ್ದಂತೆ ದರ್ಶನ್‌ ಮತ್ತಿತರಿಂದ ಸಿವಿಲ್‌ ಕೋರ್ಟ್‌ನಿಂದ ತಡೆ ಬಂದಿದೆ. ನಂತರ 2016 ಅಕ್ಟೋಬರ್​ನಲ್ಲಿ ಹೈಕೋರ್ಟ್​ನಿಂದಲೂ ತಡೆಯಾಜ್ಞೆ ತರಲಾಗಿದೆ.

ಬಳಿಕ ರಾಜ್ಯ ಸರ್ಕಾರವೂ ಈ ವಿಷಯವನ್ನು ಮರೆತೇ ಬಿಟ್ಟಿತ್ತು. ಆದರೆ ಬೆಂಗಳೂರಿನ ವಿವಿಧೆಡೆ ಇದೇ ರೀತಿ ನಿರ್ಮಿಸಲಾಗಿದ್ದ ಬಡ, ಮಧ್ಯಮ ವರ್ಗದ ಮನೆಗಳನ್ನು ನಿರ್ದಾಕ್ಷಿಣ್ಯವಾಗಿ ಕೆಡವಿದ ಸರ್ಕಾರದ ಧೋರಣೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಹೀಗಾಗಿ, ಮತ್ತೆ ದರ್ಶನ್​ ಮನೆ ಸರ್ಕಾರದ ಕಣ್ಣಿಗೆ ಬಿದ್ದಿದ್ದು, ಈ ಬಾರಿ ಯಾರೇ ಸ್ಟೇ ತಂದಿದ್ರು ಕಾನೂನಿನ ಪ್ರಕಾರ ತೆರವು ಮಾಡ್ತೇವೆ ಅಂತ ಡಿಸಿಎಂ ಡಿ.ಕೆ ‌ಶಿವಕುಮಾರ್ ಹೇಳಿದ್ದಾರೆ. ಹಾಗಾಗಿ ಕೊಲೆ ಕೇಸ್‌ ನಲ್ಲಿ ಕಸ್ಟಡಿಯಲ್ಲಿರುವ ದರ್ಶನ್‌ ಗೆ ಮತ್ತೊಂದು ಸಂಚಕಾರ ಎದುರಾಗುವ ಲಕ್ಷಣಗಳು ಎದ್ದುಕಾಣುತ್ತಿದೆ.

Ad
Ad
Nk Channel Final 21 09 2023
Ad