Bengaluru 20°C
Ad

ಚಾರ್ಜ್​ಶೀಟ್​ ಸಲ್ಲಿಕೆ ಆಗುತ್ತಿದ್ದಂತೆಯೇ ಕುಟುಂಬದವರ ಭೇಟಿಗೆ ಮನವಿ ಮಾಡಿದ ದರ್ಶನ್!

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​ ಎ2 ಆರೋಪಿಯಾಗಿದ್ದು, ಅವರ ವಿರುದ್ಧ ನೂರಾರು ಸಾಕ್ಷಿಗಳು ಪೊಲೀಸರಿಗೆ ಸಿಕ್ಕಿವೆ. ಚಾರ್ಜ್​ಶೀಟ್​ನಲ್ಲಿನ ವಿವರಗಳು ನಿಜಕ್ಕೂ ಶಾಕಿಂಗ್​ ಆಗಿವೆ.

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​ ಎ2 ಆರೋಪಿಯಾಗಿದ್ದು, ಅವರ ವಿರುದ್ಧ ನೂರಾರು ಸಾಕ್ಷಿಗಳು ಪೊಲೀಸರಿಗೆ ಸಿಕ್ಕಿವೆ. ಚಾರ್ಜ್​ಶೀಟ್​ನಲ್ಲಿನ ವಿವರಗಳು ನಿಜಕ್ಕೂ ಶಾಕಿಂಗ್​ ಆಗಿವೆ. ಬೆಂಗಳೂರಿನಲ್ಲಿ ಚಾರ್ಜ್​ಶೀಟ್​ ಸಲ್ಲಿಕೆ ಆಗುತ್ತಿದ್ದಂತೆಯೇ ಬಳ್ಳಾರಿ ಜೈಲಿನಲ್ಲಿ ಇರುವ ದರ್ಶನ್ ಅವರು ಕುಟುಂಬದವರ ಭೇಟಿಗೆ ಮನವಿ ಮಾಡಿದ್ದಾರೆ.

ಮುಂದಿನ ಕಾನೂನು ಪ್ರಕ್ರಿಯೆಗಳ ಬಗ್ಗೆ ಫ್ಯಾಮಿಲಿ ಜೊತೆ ಮಾತನಾಡಲು ಅವರು ಬಯಸಿದ್ದಾರೆ. ಬಳ್ಳಾರಿ ಜೈಲಿನಲ್ಲಿ ಇರುವ ದರ್ಶನ್ ಅವರು ಪ್ರಿಸನ್​ ಕಾಲ್​ ಸಿಸ್ಟಮ್​ ಮೂಲಕ ಕುಟುಂಬದವರಿಗೆ ದೂರವಾಣಿ ಕರೆ ಮಾಡಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಜೊತೆ ಅವರು 5 ನಿಮಿಷಗಳ ಕಾಲ ಮಾತನಾಡಿದ್ದಾರೆ. ಮುಂದಿನ ಕಾನೂನು ಹೋರಾಟದ ಬಗ್ಗೆಯೇ ಪತ್ನಿ ಜೊತೆ ಅವರು ಚರ್ಚೆ ಮಾಡಿದ್ದಾರೆ. ಪತ್ನಿ ಜೊತೆ ಮಾತನಾಡುವಾಗ ಅವರು ಭಾವುಕರಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಮುಗಿದಿದೆ. 3991 ಪುಟಗಳು ಇರುವ ಜಾರ್ಜ್​ಶೀಟ್​ ಸಲ್ಲಿಕೆ ಮಾಡಲಾಗಿದೆ. ಆರೋಪಗಳು ಗಂಭೀರ ಆಗಿರುವುದರಿಂದ ದರ್ಶನ್​ಗೆ ಜಾಮೀನು ಸಿಗುವುದು ಕಷ್ಟ ಇದೆ. ಮುಂದಿನ ಕಾನೂನು ಹೋರಾಟದ ಬಗ್ಗೆ ಕೇವಲ 5 ನಿಮಿಷ ಫೋನ್​ ಕಾಲ್​ನಲ್ಲಿ ಮಾತನಾಡಲು ದರ್ಶನ್​ಗೆ ಸಾಧ್ಯವಾಗಿಲ್ಲ. ಆದ್ದರಿಂದ ಪತ್ನಿ ಮತ್ತು ತಾಯಿ ಜೊತೆ ನೇರವಾಗಿ ಮಾತನಾಡಲು ಅವರು ತೀರ್ಮಾನಿಸಿದ್ದಾರೆ.

ನಾಳೆಯೇ (ಸೆಪ್ಟೆಂಬರ್​ 11) ಜೈಲಿಗೆ ಬರುವಂತೆ ಪತ್ನಿಗೆ ದರ್ಶನ್​ ತಿಳಿಸಿದ್ದಾರೆ. ಈ ಬಗ್ಗೆ ದರ್ಶನ್ ಕುಟುಂಬಸ್ಥರು ಬಳ್ಳಾರಿಯ ಜೈಲಧಿಕಾರಿಗಳಿಗೂ ಮಾಹಿತಿ ನೀಡಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಮತ್ತು ತಾಯಿ ಮೀನಾ ಕೂಡ ಬರುವುದಾಗಿ ಮಾಹಿತಿ ನೀಡಿದ್ದಾರೆ. ದರ್ಶನ್​ ಕುಟುಂಬದವರು ಸಂಜೆ 4 ಗಂಟೆಯ ನಂತರ ಬಳ್ಳಾರಿ ಸೆಂಟ್ರಲ್ ಜೈಲಿಗೆ ಬರುವ ಸಾಧ್ಯತೆ ಇದೆ.

Ad
Ad
Nk Channel Final 21 09 2023