Bengaluru 22°C
Ad

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಈತನದ್ದೇ ಪ್ರಮುಖ ಪಾತ್ರ; ದರ್ಶನ್ ಅಲ್ಲ !

Pavan

ಬೆಂಗಳೂರು: ಪವಿತ್ರಾ ಗೌಡ ಹೆಸರಿನಲ್ಲಿ ರೇಣುಕಾಸ್ವಾಮಿ ಜೊತೆ ಚ್ಯಾಟಿಂಗ್ ಆರಂಭಿಸಿ, ರೇಣುಕಾಸ್ವಾಮಿ ಪತ್ತೆ ಮಾಡಿ ಕೊಲೆ ಮಾಡುವವರೆಗೂ ಪವನ್ ಪಾತ್ರ ಪ್ರಮುಖದಾಗಿದ್ದೆ. ಪ್ರಕರಣದಲ್ಲಿ ಆತ ಎ3 ಆಗಿದ್ದಾನೆ. ಆತ ಪೊಲೀಸರ ಎದುರು ಹಲವು ವಿಚಾರಗಳನ್ನು ಒಪ್ಪಿಕೊಂಡಿದ್ದಾನೆ. ಬಿಕಾಂ ಮುಗಿಸಿ ಎಂಬಿಎ ಮಾಡಿದ ಈತ ದರ್ಶನ್ ಮನೆ ಸೆಕ್ಯೂರಿಟಿ ಗಾರ್ಡ್ ಆಗಿದ್ದ. ಬಳಿಕ ಪವಿತ್ರಾ ಗೌಡ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ.

ಪವನ್ ಓದುತಿದ್ದ ಕಾಲೇಜು ಬಳಿಯೇ ದರ್ಶನ್ ಮನೆ ಇತ್ತು. ಓದು ಮುಗಿಸಿದ ಬಳಿಕ ದರ್ಶನ್ ಮನೆಯಲ್ಲೇ ಕೆಲಸ ಹುಡುಕಿಕೊಂಡ. ಮೊದಲು ವಾಚ್​​ಮ್ಯಾನ್ ಆಗಿದ್ದ ಈತ ನಂತರ ಮನೆಗೆಲಸ ಮಾಡುತ್ತಿದ್ದ. ನಂತರ ಪವಿತ್ರ ಮನೆಗೆ ತೆರಳುವಂತೆ ಪವನ್​ಗೆ ದರ್ಶನ್ ಸೂಚನೆ ನೀಡಿದ್ದರು. ಅದರಂತೆ ಪವನ್ ಆರು ವರ್ಷಗಳ ಹಿಂದೆ ಪವಿತ್ರಾ ಮನೆ ಸೇರಿದ್ದ. ಪವಿತ್ರಾ ಗೌಡ ಕಾರ್ ಡ್ರೈವರ್ ಆಗಿ, ಅವರ ಮನೆಗೆಲಸ ಮಾಡಿಕೊಂಡಿದ್ದ. ಪವಿತ್ರಾ ಗೌಡರನ್ನು ಅಮ್ಮಾಜಿ ಮತ್ತು ಪವಿ ಅಕ್ಕ ಎಂದು ಕರೆಯುತಿದ್ದ. ಈತನ ಸಂಬಳ ತಿಂಗಳಿಗೆ ಕೇವಲ 15 ಸಾವಿ ರೂಪಾಯಿ. ಎಂಬಿಎ ಓದಿ ಮನೆಗೆಲಸ ಮಾಡುತ್ತಿದ್ದ ಪವನ್​ ಬಗ್ಗೆ ವಿಜಯಲಕ್ಷ್ಮೀ ಸಾಕಷ್ಟು ಕೋಪ ಇತ್ತು.

ಪವಿತ್ರಾ ಗೌಡ ಅಕೌಂಟ್​ನಿಂದ ರೇಣುಕಾಸ್ವಾಮಿಗೆ ಪವನ್​ನಿಂದಲೇ ಮೊದಲ ಸಂದೇಶ ಹೋಗಿತ್ತು. ಮೆಸೆಜ್​ ಕಂಡು ಬುದ್ದಿ ಕಲಿಸೊದಾಗಿ ಪವಿತ್ರ ಗೌಡಗೆ ಪವನ್ ತಿಳಿಸಿದ್ದ. ಪವನ್ ತನ್ನ ಫೋನ್ ನಂಬರ್​ ಅನ್ನು ರೇಣುಕಾಸ್ವಾಮಿ ಬಳಕೆ ಮಾಡುತ್ತಿದ್ದ Gowtham K.S ಅಕೌಂಟ್‌ಗೆ ಕಳುಹಿಸಿದ್ದ. ನಂಬರ್ ಕಳುಹಿಸಿದ ಕೂಡಲೇ ಕಾಲ್ ಬಂದಿತ್ತು. ಬಂದ ಕಾಲ್ ರಿಸೀವ್ ಮಾಡಿ ಪವಿತ್ರಾರಿಂದ ಪ್ರೀತಿಯ ಮಾತುಗಳನ್ನು ಆಡುವಂತೆ ಕೇಳಿಕೊಂಡಿದ್ದ ಪವನ್. ನಂತರ ಪವಿತ್ರಾ ಹೆಸರಲ್ಲಿ ಪವನ್ ಮೆಸೇಜ್ ಮಾಡಿದ್ದ.

ನಂತರ ರೇಣುಕಾ ಸ್ವಾಮಿಯನ್ನು ಪವನ್ ಹುಡುಕಿದ್ದ. ಪವನ್​ನಿಂದಲೇ ರೇಣುಕಾಸ್ವಾಮಿ ಕಿಡ್ನ್ಯಾಪ್ ಪ್ಲ್ಯಾನ್ ನಡೆದಿತ್ತು. ರೇಣುಕಾಸ್ವಾಮಿ ಕರೆತರಲು ರಾಘವೇಂದ್ರಗೆ ಪವನ್ ಸೂಚಿಸಿದ್ದ. ಕರೆತಂದ ಮೇಲೆ ಪವನ್​ ಮೇಲೆ ಈತನೂ ಹಲ್ಲೆ ಮಾಡಿದ್ದ. ಈ ಬಗ್ಗೆ ಪೊಲೀಸರಿಗೆ ಪವನ್ ಸ್ವ ಇಚ್ಚಾ ಹೇಳಿಕೆ ನೀಡಿದ್ದಾನೆ. ಈತನ ರೇಣುಕಾಸ್ವಾಮಿ ಕೊಲೆ ಕೇಸ್ ನ ಪ್ರಮುಖ ಆರೋಪಿಯೂ ಹೌದು.

Ad
Ad
Nk Channel Final 21 09 2023