Ad

ಖೈದಿ ನಂಬರ್ 6106: ‘ಡಿ ಬಾಸ್’ ಹೆಸರಲ್ಲಿ ಚಾಲಕನಿಂದ ‘ಆಟೋ ವ್ಹೀಲಿಂಗ್’

Weel

ಬೆಂಗಳೂರು:  ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದರೇ, ಇತ್ತ ನಟ ದರ್ಶನ್ ಅಭಿಮಾನಿಗಳ ಹುಚ್ಚಾಟ ಮಾತ್ರ ಹೆಚ್ಚಾಗಿದೆ. ಬೆಂಗಳೂರಲ್ಲಿ ಅಭಿಮಾನಿಯೊಬ್ಬ ಹುಚ್ಚಾಟ ಪ್ರದರ್ಶಿಸಿದ್ದು, ಡಿ ಬಾಸ್ ಹೆಸರಲ್ಲಿ ಆಟೋ ಚಾಲಕನೊಬ್ಬ ವ್ಹೀಲಿಂಗ್ ಮಾಡಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Ad
300x250 2

ಬೆಂಗಳೂರಿನ ರಸ್ತೆಯೊಂದರಲ್ಲಿ ಆಟೋ ಚಾಲಕನೊಬ್ಬ ವ್ಹೀಲಿಂಗ್ ಮಾಡಿರೋ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜಗ್ಗ ಬಾಸ್ ಎನ್ನುವಂತ ಇನ್ ಸ್ಟಾಗ್ರಾಂನಲ್ಲಿ ವೀಡಿಯೋ ಅಪ್ ಲೋಡ್ ಮಾಡಲಾಗಿದ್ದು, ಆಟೋ ವ್ಹೀಲಿಂಗ್ ಮಾಡಿ, ಸಾರ್ವಜನಿಕರ ಜೀವಕ್ಕೆ ಕುತ್ತು ತರುವಂತೆ ದರ್ಶನ್ ಅಭಿಮಾನಿಯೊಬ್ಬ ನಡೆದುಕೊಂಡಿರೋದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ತನ್ನ ಆಟೋದ ಮೇಲೆ ನಟ ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನೀಡಲಾಗಿರುವಂತ ವಿಚಾರಣಾಧೀನ ಖೈದಿ ನಂ.6106 ಹಾಕಿಸಿಕೊಂಡು, ವ್ಹೀಲಿಂಗ್ ಮಾಡಿ, ಹುಚ್ಚಾಟ ಪ್ರದರ್ಶನ ಮಾಡಿದ್ದಾರೆ.

Ad
Ad
Nk Channel Final 21 09 2023
Ad