ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟಾಗಿದ್ದು, ಅಲ್ಲಿಯೂ ದಿನಕ್ಕೊಂದು ಬೇಡಿಕೆಗಳನ್ನು ಸಲ್ಲಿಸುತ್ತಿದ್ದಾರೆ.
ಕಳೆದ ಮೂರು ತಿಂಗಳಿಂದ ಜೈಲು ವಾಸ ಅನುಭವಿಸುತ್ತಿರುವ ದರ್ಶನ್, ಜೈಲಾಧಿಕಾರಿಗಳಿಗೆ ಹೊಸ ಬೇಡಿಕೆ ಮುಂದಿಟ್ಟಿದ್ದಾರೆ.ತಲೆದಿಂಬು ನೀಡುವಂತೆ ಬೇಡಿಕೆ ಇಟ್ಟಿದ್ದಾರಂತೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ಮನೆ ಊಟ, ಹಾಸಿಗೆ ದಿಂಬು ಸೇರಿದಂತೆ ವಿವಿಧ ಸೌಲಭ್ಯಕ್ಕಾಗಿ ಮನವಿ ಮಾಡಿದ್ದ ದರ್ಶನ್, ಈಗ ಬಳ್ಳಾರಿ ಜೈಲಿನಲ್ಲಿ ಟಿವಿ ವ್ಯವಸ್ಥೆ ಮಾಡುವಂತೆ ಕೇಳಿಕೊಂಡಿದ್ದಾರೆ. ಆದರೆ ಟಿವಿ ಸೌಲಭ್ಯ ಕಲ್ಪಿಸಿಲ್ಲ. ಈಗ ಹೊಸ ಬೇಡಿಕೆ ಇಟ್ಟಿದ್ದು, ತಲೆದಿಂಬು ಇಲ್ಲದೇ ನಿದ್ದೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಮೃದುವಾದ ದಿಂಬಿನ ವ್ಯವಸ್ಥೆ ಮಾಡುವಂತೆ ಜೈಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ ದರ್ಶನ್ ಬೇಡಿಕೆಯನ್ನು ನಿರಾಕರಿಸಿರುವ ಜೈಲಾಧಿಕಾರಿಗಳು ಜೈಲಿನಲ್ಲಿ ಏನು ನಿಯಮಗಳಿದೆ ಅದನ್ನು ಪಾಲಿಸಬೇಕು. ಹೊಸ ಸೌಲಭ್ಯಗಳು ಏನೆ ಬೇಕೆಂದರೂ ಕೋರ್ಟ್ ಗೆ ಅರ್ಜಿ ಹಾಕಿ ಎಂದಿದ್ದಾರೆ ಎನ್ನಲಾಗಿದೆ.