Ad

ಮೊಬೈಲ್ ಚಾರ್ಜ್ ಹಾಕಲು ಹೋದಾಗ ಕರೆಂಟ್‌ ಶಾಕ್‌ : ವಿದ್ಯಾರ್ಥಿ ಮೃತ್ಯು

ಎಲೆಕ್ಟ್ರಿಕ್ ಶಾಕ್ ನಿಂದ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು: ಎಲೆಕ್ಟ್ರಿಕ್ ಶಾಕ್ ನಿಂದ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ರಾಜಾಜಿನಗರ ಬಳಿಯ ಮಂಜುನಾಥ್ ನಗರದ ಪಿಜಿಯಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿಯನ್ನು ಶ್ರೀನಿವಾಸ್ (24) ಎಂದು ಗುರುತಿಸಲಾಗಿದ್ದು, ಈತ ಬೀದರ್ ಮೂಲದವನು.

Ad
300x250 2

ಶ್ರೀನಿವಾಸ್, ಬೀದರ್ ನಿಂದ ಬೆಂಗಳೂರಿಗೆ ಬಂದು ಸಾಫ್ಟ್ ವೇರ್ ಕೋರ್ಸ್ ಮಾಡುತ್ತಿದ್ದನು. ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಪಿಜಿಯಲ್ಲಿ ತನ್ನ ಮೊಬೈಲ್ ಚಾರ್ಜ್ ಹಾಕಲು ಹೋಗಿದ್ದಾನೆ. ಈ ವೇಳೆ ಎಲೆಕ್ಟ್ರಿಕ್ ಶಾಕ್‍ನಿಂದ ಆತ ಮೃತಪಟ್ಟಿದ್ದಾನೆ. ಸ್ವಿಚ್ ಬೋರ್ಡ್ ನಿಂದ ವಿದ್ಯುತ್ ತಗುಲಿ ಸಾವು ಸಂಭವಿಸಿರುವ ಶಂಕೆ ವ್ಯಕ್ತವಾಗುತ್ತಿದೆ. ಈ ಸಂಬಂಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Ad
Ad
Nk Channel Final 21 09 2023
Ad